ಧರೆಗುರುಳಿದ ದೈವ ಸಾನಿಧ್ಯವಿರುವ ನೇರಳೆ ಮರ-ಭಾರೀ ಗಾಳಿಗೆ ಅನೇಕ ಹಾನಿ
ಎಡೆಬಿಡದೆ ಬೀಸುತ್ತಿರುವ ಭಾರೀ ಗಾಳಿಗೆ ಅಳಿಯೂರಿನಿಂದ ಪಣಪಿಲ ಗ್ರಾಮಕ್ಕೆ ತೆರಳುವ ನೂರಾರು ವರ್ಷಗಳ ಇತಿಹಾಸವಿರುವ ನೇರಳಕಟ್ಟೆ ಎಂಬಲ್ಲಿನ ನೇರಳೆ ಮರವು ಧರೆಗುರುಳಿದೆ.
ಅನಾದಿ ಕಾಲದಿಂದಲೂ ಕುಕ್ಕಿನಂತ್ತಾಯ ಮತ್ತು ಕೊಡಮಣಿತ್ತಾಯ ದೈವಗಳ ಗಡು ಜಾಗವಾಗಿದ್ದು ಭಕ್ತಾದಿಗಳು ಈ ಮರಕ್ಕೆ ಕಟ್ಟೆಯನ್ನು ಕಟ್ಟಿ ಪೂಜಿಸುತ್ತಿದ್ದರು. ಮತ್ತು ಅನೇಕ ವರ್ಷಗಳ ಕಾಲ ಇಲ್ಲಿ ದೊಂಪದ ಬಲಿ ಸೇವೆಯು ನಡೆಯುತ್ತಿತ್ತು. ಇದೀಗ ಬೀಸಿದ ಭಾರಿ ಗಾಳಿಗೆ ನೇರಳೆ ಮರವು ಧರೆಗೆ ಉರುಳಿದ್ದು ನೂರಾರು ವರ್ಷಗಳ ಇತಿಹಾಸವಿರುವ ಮರವು ಕಣ್ಮರೆಯಾದಂತಾಗಿದೆ.
ಅನೇಕ ಕಡೆಗಳಲ್ಲಿ ಬೀಸಿದ ಗಾಳಿಗೆ ಆಸ್ತಿಪಾಸ್ತಿ ಮಾತ್ರವಲ್ಲದೆ ಬೆಳೆ ಹಾನಿಯಾಗಿದೆ ಎಂದು ವರದಿಯಾಗಿದೆ.
0 Comments