ಕಡಂದಲೆ ಪ್ರೌಢಶಾಲೆಯಲ್ಲಿ ಫೋಕ್ಸೋ & ಬಾಲ್ಯ ವಿವಾಹ ಕಾಯ್ದೆಯ ಮಾಹಿತಿ
ಮೂಡುಬಿದಿರೆ: ತಾಲೂಕಿನ ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಶನಿವಾರ ಶಾಲಾ ವಿವಿಧ ಸಂಘಗಳ ಉದ್ಘಾಟನೆ ಹಾಗೂ ಬಾಲ್ಯ ವಿವಾಹ ಮತ್ತು ಪೊಕ್ಸೋ ಕಾಯ್ದೆಯ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು.
ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನಂದಳಿಕೆ ಇದರ ಸಂಚಾಲಕ ಜೇಸಿ ಸಂದೀಪ್. ವಿ. ಪೂಜಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಶಾಲಾ ಮುಖ್ಯ ಶಿಕ್ಷಕ ದಿನಕರ ಕುಂಭಾಶಿ ಅಧ್ಯಕ್ಷತೆ ಅಧ್ಯಕ್ಷತೆ ವಹಿಸಿ ಶಾಲೆಯ ವಿವಿಧ ಸಂಘಗಳ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಿದರು.
ಶಿಕ್ಷಕರಾದ ರೂಪಿತ್ ರೈ, ಚಂದ್ರಕಲಾ, ರಕ್ಷಿತಾ ಉಪಸ್ಥಿತರಿದ್ದರು.
ಶಿಕ್ಷಕ ಸಂಪತ್ ರಾಜ್ ಸ್ವಾಗತಿಸಿದರು. ಸುಧಾಕರ ಪೊಸ್ರಾಲ್ ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ಉಪಾಧ್ಯಾಯ ವಂದಿಸಿದರು.
0 Comments