ಬಿಎಸ್‌ಎನ್‌ಎಲ್ ಟವರ್‌ಗಳ ಪುನಶ್ಚೇತನಕ್ಕೆ ದೆಹಲಿಯಲ್ಲಿ ಸಂಸದ ಕೋಟ ಸರ್ಕಸ್-20 ದಿನದಲ್ಲಿ ಸಮಸ್ಯೆಗೆ ಮುಕ್ತಿ ಹಾಡುತ್ತೇವೆಂದ ಬಿಎಸ್‌ಎನ್‌ಎಲ್ ಅಧ್ಯಕ್ಷ

ಜಾಹೀರಾತು/Advertisment
ಜಾಹೀರಾತು/Advertisment

 ಬಿಎಸ್‌ಎನ್‌ಎಲ್ ಟವರ್‌ಗಳ ಪುನಶ್ಚೇತನಕ್ಕೆ ದೆಹಲಿಯಲ್ಲಿ ಸಂಸದ ಕೋಟ ಸರ್ಕಸ್-20 ದಿನದಲ್ಲಿ ಸಮಸ್ಯೆಗೆ ಮುಕ್ತಿ ಹಾಡುತ್ತೇವೆಂದ ಬಿಎಸ್‌ಎನ್‌ಎಲ್ ಅಧ್ಯಕ್ಷ



ಅತಿಹೆಚ್ಚು ಗುಡ್ಡಗಾಡು ಪ್ರದೇಶದ ಜಿಲ್ಲೆ ಚಿಕ್ಕಮಗಳೂರಿನಲ್ಲಿ ಸುಗಮ ದೂರವಾಣಿ ಸಂಪರ್ಕ ಎಂಬುದು ಮರೀಚಿಕೆಯಾಗಿದೆ. ಈಗ ಇರುವ ಸುಮಾರು 400ಕ್ಕೂ ಹೆಚ್ಚು ಬಿಎಸ್ಎನ್ಎಲ್ ಟವರ್ ಗಳು ಮೂಲಭೂತ ಸೌಕರ್ಯ ಕೊರತೆಯಿಂದಾಗಿ ಮೊಬೈಲ್ ಬಳಕೆದಾರರಿಗೆ ಸಂಪರ್ಕದ ಕೊರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ  ಸಂಸದ ಕೋಟ ಶ್ರೀನಿವಾಸ ಪೂಜಾರಿ ಈಗಾಗಲೇ ಜಿಲ್ಲಾ ಮಟ್ಟದ ಭಾರತ ಸಂಚಾರ ನಿಗಮದ ಅಧಿಕಾರಿಗಳ ಸಭೆ ಕರೆದು ಕುಂದು ಕೊರತೆಯನ್ನು ಆಲಿಸಿದ್ದಾರೆ.


ಬಿಎಸ್ಎನ್ಎಲ್ ನ ರಾಜ್ಯಮಟ್ಟದ ಅಧಿಕಾರಿಗಳು ಭಾಗವಹಿಸಿ ಇಲಾಖೆಯ ಮಟ್ಟದಲ್ಲಿ ಈಗಿರುವ ಕೊರತೆಗಳು ಉಲ್ಲೇಖಿಸಿದ್ದಾರೆ. ಆದ್ದರಿಂದ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಬಿಎಸ್ಎನ್ಎಲ್ ಟವರ್‌ಗಳ ಪುನಶ್ಚೇತನಕ್ಕೆ ಅಗತ್ಯವಾದ ತಾಂತ್ರಿಕ ಉಪಕರಣಗಳನ್ನು ಕೂಡಲೇ  ಸರಬರಾಜು ಮಾಡಬೇಕು ಎಂದು ನವದೆಹಲಿಯಲ್ಲಿ ಭಾರತ ಸಂಚಾರ ನಿಗಮದ ಅಧ್ಯಕ್ಷ  ಮತ್ತು ಆಡಳಿತ ನಿರ್ದೇಶಕರಾದ ಶ್ರೀ ರಾಬರ್ಟ್ ರವಿಯವರನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದರು.


ಶ್ರೀ ರಾಬರ್ಟ್ ರವಿ ಯವರು ಈ ಎಲ್ಲಾ ಸಮಸ್ಯೆಗಳನ್ನು ಗಮನಿಸಿ 20 ದಿವಸಗಳ ಒಳಗಡೆ ಎಲ್ಲಾ ತಾಂತ್ರಿಕ ಉಪಕರಣ ಮತ್ತು ಆರ್ಥಿಕ ಸಹಕಾರವನ್ನು ಸರಬರಾಜು ಮಾಡಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಮತ್ತು ಬಿಎಸ್ಎನ್ಎಲ್ 4 G ಜಿ ಮತ್ತು 5 Gಗೆ ಉನ್ನತೀಕರಣದ ಭರವಸೆ ನೀಡಿದರು. 


ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರ ಜೊತೆಗೆ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಉಪಸ್ಥಿತರಿದ್ದರು.

Post a Comment

0 Comments