ಮೂಡುಬಿದಿರೆ ದೇವಾಡಿಗರ ಸಂಘದಿಂದ 12 ನೇ ವರ್ಷದ ಆಟಿಡೊಂಜಿ ದಿನ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ದೇವಾಡಿಗರ ಸಂಘದಿಂದ 12 ನೇ ವರ್ಷದ ಆಟಿಡೊಂಜಿ ದಿನ

ಮೂಡುಬಿದಿರೆ: ದೇವಾಡಿಗರ ಸಂಘ ಮೂಡುಬಿದಿರೆ, ದೇವಾಡಿಗರ‌ ಮಹಿಳಾ ವೇದಿಕೆ ಮತ್ತು ದೇವಾಡಿಗರ ಯುವ ವೇದಿಕೆ ಜಂಟಿ ಆಶ್ರಯದಲ್ಲಿ ಭಾನುವಾರ  ಶ್ರೀರಾಮಪುರ ಗೌರಿಕೆರೆಯಲ್ಲಿರುವ ದೇವಾಡಿಗರ ಸಮಾಜ ಭವನದಲ್ಲಿ  12ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವು  ನಡೆಯಿತು.

ಉಡುಪಿಯ ಜ್ಯೋತಿ ಪ್ರಶಾಂತ್  ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ  ಆಟಿ ತಿಂಗಳು ಅಶುಭ ತಿಂಗಳಲ್ಲ. ತುಳುವರಿಗೆ  ಶ್ರೇಷ್ಠವಾದ ತಿಂಗಳು ಆಟಿಯ ಆಚರಣೆ ಮೂಢನಂಬಿಕೆ ಅಲ್ಲ. ಅದಕ್ಕೆ ತನ್ನದೇ ಮಹತ್ವ, ಅರ್ಥವಿದೆ. ತುಳು ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಆಟಿ‌ ಕಾರ್ಯಕ್ರಮಗಳು ಸಹಕಾರಿಎಂದ ಅವರು ಆಟಿ ತಿಂಗಳ ವಿಶೇಷತೆಯ ಕುರಿತು ಆಟಿ ಕಳಂಜದ ಮೂಲ ಸ್ವರೂಪದೊಂದಿಗೆ ಪುನರ್  ಆಚರಿಸಬೇಕೆಂದರು.

ಸಂಘದ ಅಧ್ಯಕ್ಷ ಪುರಂದರ ದೇವಾಡಿಗ ಅಧ್ಯಕ್ಷತೆ ವಹಿಸಿ ಮಾತನಾಡಿ ದೇವಾಡಿಗರ ಸಮಾಜವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ 12 ವರ್ಷಗಳಿಂದ ಯುವ ವೇದಿಕೆ, ಮಹಿಳಾ ವೇದಿಕೆ ಆಯೋಜಿಸುತ್ತಿರುವ ಆಟಿದ ಕೂಟ ಅರ್ಥಪೂರ್ಣವಾಗಿ ನಡೆಯುತ್ತಿದೆ ಎಂದರು.

ಸನ್ಮಾನ:   ಸಮಾಜದ ಹಿರಿಯರಾದ ರಾಜೀವಿ ದೇವಾಡಿಗ, ಮೀನಾ ಮೊಯಿಲಿ, ಪೂವಪ್ಪ ದೇವಾಡಿಗ, ಅಗ್ನಿಶಾಮಕ ದಳದಲ್ಲಿ ಪದೋನ್ನತಿ ಹೊಂದಿದ ಚಂದ್ರಶೇಖರ್ ದೇವಾಡಿಗ, ಶೈಕ್ಷಣಿಕ ಸಾಧನೆ ಮಾಡಿದ ಶರಣ್, ಡಾ.ರಮ್ಯ ಅವರನ್ನು ಗೌರವಿಸಲಾಯಿತು.

ಮಂಗಳೂರು ದೇವಾಡಿಗರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಪ್ರಮೀಳ ಎಸ್. ದೇವಾಡಿಗ ಮುಖ್ಯ ಅತಿಥಿಯಾಗಿದ್ದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಲಲಿತಾ ಸಂಜೀವ ಮೊಯ್ಲಿ, ಯುವ ವೇದಿಕೆಯ ಅಧ್ಯಕ್ಷ ಪ್ರೇಮ್ ಶಂಕರ್ , ಕವಿತಾ ಸುರೇಶ್ ಉಪಸ್ಥಿತರಿದ್ದರು.

ಮಮತಾ ಸತೀಶ್ ಸ್ವಾಗತಿಸಿದರು.  ಸುಕಾನ್ಯ, ರೇಖಾ, ಅಕ್ಷತಾ, ಅನಿತಾ, ಡಾ.ರಮ್ಯ ಸನ್ಮಾನಿತರನ್ನು ಪರಿಚಯಿಸಿದರು. ರಮಾ ಪದ್ಮನಾಭ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾ ಪುರಂದರ್ ದೇವಾಡಿಗ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿವಿಧ ರೀತಿಯ ಆಟಿ ತಿಂಡಿ ತಿನಿಸುಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ‌ ನಡೆಯುತು.

Post a Comment

0 Comments