ಕಂಬಳ ಅನುದಾನ ಬಿಡುಗಡೆ ವಿಳಂಬ : ಜೂನ್ 19ಕ್ಕೆ ಸಿಎಂ, ಸಚಿವರ ಭೇಟಿ, ಮಾತುಕತೆ

ಜಾಹೀರಾತು/Advertisment
ಜಾಹೀರಾತು/Advertisment

 ಕಂಬಳ ಅನುದಾನ ಬಿಡುಗಡೆ ವಿಳಂಬ :  ಜೂನ್ 19ಕ್ಕೆ ಸಿಎಂ, ಸಚಿವರ ಭೇಟಿ, ಮಾತುಕತೆ


ಮೂಡುಬಿದಿರೆ: ಅವಿಭಜಿತ ಜಿಲ್ಲೆಯಲ್ಲಿ ನಡೆಯುವ ಪ್ರತಿ ಕಂಬಳಕ್ಕೆ ಸರಕಾರವು ತಲಾ 5 ಲಕ್ಷ ರೂ. ಅನುದಾನವನ್ನು ಹಿಂದೆ ನೀಡುತ್ತಿತ್ತು ಆದರೆ ಪ್ರಸಕ್ತ ವರ್ಷದಲ್ಲಿ ಬಿಡುಗಡೆಯಾಗಿಲ್ಲ. ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜೂನ್ 19ರಂದು ಜಿಲ್ಲಾ ಕಂಬಳ ಸಮಿತಿಯಿಂದ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡುವ ಕುರಿತು ಭಾನುವಾರ ಸಮಾಜ ಮಂದಿರದಲ್ಲಿ ನಡೆದ ಜಿಲ್ಲಾ ಕಂಬಳ ಸಮಿತಿಯಿಂದ ನಡೆದ ಸಭೆಯಲ್ಲಿ  ಸಭೆಯಲ್ಲಿ ತೀರ್ಮಾನಿಸಲಾಯಿತು. 


  ಸರ್ಕಾರದ ಅನುದಾನ ಬಿಡುಗಡೆ ಕುರಿತು ಸಮಿತಿಯ ಪದಾಧಿಕಾರಿಗಳು, ಕಂಬಳಗಳ ವ್ಯವಸ್ಥಾಪಕರ ಜೊತೆ ನಡೆದ  ಸಮಾಲೋಚನಾ ಸಭೆಯಲ್ಲಿ

ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಕಂಬಳ ರಾಜಕೀಯರಹಿತವಾಗಿ, ರೈತಾಪಿ ವರ್ಗದ ಕ್ರೀಡೆಯಾಗಿದೆ. ತುಳುನಾಡಿನ ಪರಂಪರೆಯ ಪ್ರತೀಕವಾಗಿರುವ ಕಂಬಳದ ಉಳಿವಿಗಾಗಿ ಹಲವಾರು ಹೋರಾಟಗಳು ನಡೆದಿವೆ. ಕಂಬಳವನ್ನು ಬೆಳೆಸಿ, ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರೋತ್ಸಾಹಿಸಬೇಕು. 24 ಕಂಬಳಗಳಿಗೆ ಅನುದಾನ ತಲಾ 5 ಲಕ್ಷ ರೂ. ಮಂಜೂರಾಗಿದ್ದರೂ, ಬಿಡುಗಡೆಯಾಗಿಲ್ಲ. ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅವರ ನೇತೃತ್ವದಲ್ಲಿ ಜೂನ್ 19ರಂದು ಕಂಬಳ ಸಮಿತಿಯ ಪ್ರಮುಖರು, ಕಂಬಳ ವ್ಯವಸ್ಥಾಪಕರು ಮುಖ್ಯಮಂತ್ರಿ, ಕ್ರೀಡಾಸಚಿವರು, ಪ್ರವಾಸೋದ್ಯಮ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರನ್ನು ಭೇಟಿಯಾಗಿ ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತೇವೆ. ಕಂಬಳದ ಮಹತ್ವದ ಕುರಿತು ಮನವರಿಕೆ ಮಾಡುತ್ತೇವೆ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದರೂ ತಾಂತ್ರಿಕ ಕಾರಣಗಳಿಂದ 35 ಲಕ್ಷ ರೂ. ಮಾತ್ರ ಕಂಬಳಕ್ಕೆ ವಿನಿಯೋಗಿಸಲು ಸಾಧ್ಯವಾಗಿದೆ.ಉಳಿದ ಮೊತ್ತ ಸರ್ಕಾರಕ್ಕೆ ಹಿಂದೆ ಹೋಗಿದೆ ಎಂದರು. 

ಮಂಗಳೂರು ಕಂಬಳದ ವ್ಯವಸ್ಥಾಪಕ, ದ.ಕ ಜಿಲ್ಲೆಗೆ ನೂತನ ಸಂಸದರಾಗಿರುವ ಕ್ಯಾ.ಬ್ರಿಜೇಶ್ ಚೌಟ ಅವರ ಅನುಪಸ್ಥಿತಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಕಂಬಳ ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್ ಮಾತನಾಡಿ, ಬೆಂಗಳೂರು ಕಂಬಳಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾದ ಕಾರಣ ಉಳಿದ ಕಂಬಳಗಳಿಗೆ ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಎಲ್ಲ ಕಂಬಳಗಳಿಗೆ ಅದು ಬಿಡುಗಡೆಯಾಗಲಿ ಎನ್ನುವುದು ನಮ್ಮ ಮನವಿಯಾಗಿದೆ. ಕಂಬಳದ ಓಟಗಾರರು ಒಂದೇ ಕೂಟದಲ್ಲಿ ಐದಾರು ಕೋಣಗಳನ್ನು ಓಡಿಸುತ್ತಾರೆ. ಒಂದು ಕೂಟದಲ್ಲಿ ಅವರು ಗರಿಷ್ಠ ಮೂರು ಕೋಣಗಳನ್ನು ಮಾತ್ರ ಓಡಿಸುವುದು, ಕೋಣಗಳನ್ನು ಬಿಡುವವರು ಕೂಡ ಮೂರು ಜೊತೆ ಕೋಣಗಳನ್ನು ಬಿಡುವ ನಿಯಮವನ್ನು ಮುಂದಿನ ಕಂಬಳಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಹೀಗೆ ಮಾಡುವುದರಿಂದ ಕಂಬಳವನ್ನು ಸರಿಯಾದ ಸಮಯದಲ್ಲಿ ಪ್ರಾರಂಭಿಸಿ, ಮುಕ್ತಾಯಗೊಳಿಸಲು ಸಾಧ್ಯವಾಗುತ್ತದೆ ಎಂದರು. 

ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ, ಗೌರವಾಧ್ಯಕ್ಷ ಏರ್ಮಾಳು ರೋಹಿತ್ ಹೆಗ್ಡೆ, ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ, ಉಪಾಧ್ಯಕ್ಷರಾದ ನವೀನ್‌ಚಂದ್ರ ಆಳ್ವ ತಿರುವೈಲುಗುತ್ತು, ಶ್ರೀಕಾಂತ್ ಭಟ್ ನಂದಳಿಕೆ, ಸತೀಶ್ಚಂದ್ರ ಸಾಲ್ಯಾನ್, ಸಮಿತಿಯ ಮಾಜಿ ಅಧ್ಯಕ್ಷ ಪಿ.ಆರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments