ಗುಡ್ಡದಲ್ಲಿ ಅಕ್ರಮವಾಗಿ ಕಟ್ಟಿ ಹಾಕಲಾಗಿದ್ದ ಗೋವುಗಳ ರಕ್ಷಣೆ
ಮೂಡುಬಿದಿರೆ: ಕಸಾಯಿಖಾನೆಗೆ ಕೊಂಡೊಯ್ಯಲು ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ 14 ಗೋವುಗಳನ್ನು ಕಟ್ಟಿ ಹಾಕಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿ ಗೋವುಗಳನ್ನು ರಕ್ಷಿಸಿದ ಘಟನೆ ಮೂಡುಬಿದಿರೆಯಲ್ಲಿ ಶನಿವಾರ ನಡೆದಿದೆ.
ತೋಡಾರಿನ ಹಿದಾಯತ್ ನಗರದ ಪೆರಾಡಿ ಕಂಪೌಂಡ್ ನ ಅಬುಸಾಲಿ ಎಂಬವರ ಮನೆಯ ಜಾಗದಲ್ಲಿ ಹಂಡೇಲಿನ ಹಸನ್ ಬಾವಾ ಎಂಬವರು 12 ಹೋರಿ ಮತ್ತು 2 ಕೋಣಗಳನ್ನು ಅಕ್ರಮವಾಗಿ ಕಟ್ಟಿ ಹಾಕಿದ್ದರು. ಈ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಂಡ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿತ್ಯಾನಂದ ಪಂಡಿತ್ ಮತ್ತು ಸಿಬಂದಿಗಳು ದಾಳಿ ನಡೆಸಿದ್ದರು.
ಹಸನ್ ಬಾವಾ ಮತ್ತು ಅಬುಸಾಲಿ ತಪ್ಪಿಸಿಕೊಂಡಿದ್ದಾರೆ. ರಕ್ಷಿಸಿದ ಗೋವುಗಳನ್ನು ಕೆಂಜಾರಿನ ಗೋಶಾಲೆಗೆ ಹಸ್ತಾಂತರಿಸಲಾಗಿದೆ.
ಮೂಡುಬಿದಿರೆಯಲ್ಲಿ ಅಕ್ರಮವಾಗಿ ಗೋವುಗಳ ಸಾಗಾಟ ಮತ್ತು ಕಸಾಯಿಖಾನೆಗಳು ನಡೆಯುತ್ತಿರುವುದರ ಬಗ್ಗೆ ಹಿಂದೂ ಸಂಘಟನೆಗಳು ಪೊಲೀಸರಿಗೆ ಈ ಮೊದಲೇ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.
0 Comments