ಮೂಡುಬಿದಿರೆ: ಪಡು ಬಸದಿ ವಾರ್ಷಿಕ ಉತ್ಸವ
ಇಲ್ಲಿನ ಪಡುಬಸದಿಯ ವಾರ್ಷಿಕ ಉತ್ಸವ ಶ್ರೀ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಿತು.
ಶುಕ್ರವಾರ ಬೆಳಗ್ಗೆ ತೋರೋಣ ಮಹೂರ್ತ, ವಿಮಾನ ಶುದ್ದಿ ಮಧ್ಯಾಹ್ನ ಶ್ರೀ ಜಿನಮುಖ ವಸ್ತ್ರ ಉದ್ಘಾಟನೆ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಬ್ರಹ್ಮ ದೇವರ ಆರಾಧನೆ ನೆರವೇರಿಸಿದರು. ಸಾಯಂಕಾಲ ಬ್ರಹ್ಮ ದೇವರ ಉತ್ಸವ ಭಗವಾನ್ ಅನಂತ, ಧರ್ಮ ವಿಮಲಾನಾಥ ಸ್ವಾಮಿ 24 ಕಲಶ ಅಭಿಷೇಕ, ಸರಸ್ವತಿ, ಪದ್ಮಾವತಿ ದೇವಿ, ಕ್ಷೇತ್ರ ಪಾಲ ನಾಗ ದೇವರ ಷೋಡಶ ಉಪಚಾರ ಪೂಜೆ ನೆರವೇರಿತು.
ಧಾರ್ಮಿಕ ಸಂದೇಶ ನೀಡಿದ ಭಟ್ಟಾರಕ ಸ್ವಾಮೀಜಿ, ನಮ್ಮ ಒಳ್ಳೆಯ ಸಭ್ಯ ಸದಾಚಾರ ಗುಣಗಳಿಂದ ಶಾಂತಿ ನೆಮ್ಮದಿಯಾಗಿ ಬಾಳಬಹುದು. ಕ್ರಿ ಪೂ 3ನೇ ಶತಮಾನದ ಪೂರ್ವದಲ್ಲಿ ನಿರ್ಮಾಣವಾದ ಮೂಡುಬಿದಿರೆಯ ಗುರು ಪೀಠ ಪ್ರಾರಂಭದಲ್ಲಿ ಪಡು ಬಸದಿ ಯಿಂದ ಆರಂಭ ವಾಗಿತ್ತು. ಸಾವಿರಾರು ತಾಡಾ ಓಲೆ ಗ್ರಂಥ 1940ರ ಸುಮಾರಿಗೆ ಕಂಡು ಹಿಡಿದು ಶ್ರೀ ಮಠ ದ ರಮಾ ರಾಣಿ ಶೋದ ಸಂಸ್ಥಾನದಲ್ಲಿ ಇರಿಸಿ ಶೋದ ಕಾರ್ಯ ನಿರಂತರ ನಡೆಯುತ್ತಿದೆ.ಕ್ಷೇತ್ರದ ಪ್ರಗತಿಗೆ ಸರ್ವರ ಸಹಕಾರ ಇರಲಿ ಎಂದು ನುಡಿದರು
ಬಸದಿಗಳ ಮೊಕ್ತೇಸರರಾದ ಪಟ್ಟಣ ಶೆಟ್ಟಿ ಸುದೇಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್, ಆದರ್ಶ್
ಪ್ರಮುಖರಾದ ಶೈಲೇoದ್ರ ಜೈನ್, ಶಂಭವ್, ಕುಲದೀಪ ಎಂ., ಬಾಹುಬಲಿ ಪ್ರಸಾದ್, ಅಶೋಕ್ ಕೊಡಿಪಾಡಿ, ನಾಗ ವರ್ಮ, ಪ್ರತಾಪ್ ಕುಮಾರ್ ಮತ್ತಿತರರಿದ್ದರು.
ಅರ್ಚಕ ಅರವಿಂದ್ ಹಾಗೂ ಬಳಗದವರು ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.
0 Comments