ಮೂಡುಬಿದಿರೆ ಸಾವಿರಕಂಬದ ಬಸದಿಯಲ್ಲಿ ಶ್ರಮಣ ಸಂಸ್ಕೃತಿ ಸಮ್ಮೇಳನ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಸಾವಿರಕಂಬದ ಬಸದಿಯಲ್ಲಿ ಶ್ರಮಣ ಸಂಸ್ಕೃತಿ ಸಮ್ಮೇಳನ

ಮೂಡುಬಿದಿರೆ: ದಿಗಂಬರ ಮುನಿಗಳ ಜೀವನವು ಪ್ರಕೃತಿಯ ಬದುಕುವ ಕಲೆ. ನಾವು ಧಾರ್ಮಿಕ ಚೌಕಟ್ಟಿನಲ್ಲಿ ಬದುಕುವುದನ್ನು ಕಲಿಯಬೇಕು.ಶ್ರವಣ ಪರಂಪರೆ ಹಾಗೂ ಧರ್ಮ ಸಂಸ್ಕೃತಿಗೆ ದಿಗಂಬರ ಮುನಿಗಳ ಕೊಡುಗೆ ಅಪಾರ ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.


ಶ್ರಮಣ ಸಂಸ್ಕೃತಿ ಸಮ್ಮೇಳನ ಹಾಗೂ 108 ಚಾರಿತ್ರ ಚಕ್ರವರ್ತಿ ಶಾಂತಿ ಸಾಗರ ಮುನಿರಾಜರ ಆಚಾರ್ಯ ಪದಾರೋಹಣ ಶತಾಬ್ದಿವರ್ಷ ಆಚರಣೆ ಪ್ರಯುಕ್ತ ಸಾವಿರ ಕಂಬದ ಬಸದಿ ಆವರಣದಲ್ಲಿ ಮಂಗಳವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. 


ಶಾಂತಿ ಸಾಗರ್ ಶಿರಹಟ್ಟಿ ಶಾಸ್ತ್ರಿ ಮೈಸೂರು ಮುಖ್ಯ ಅತಿಥಿಯಾಗಿ ಮಾತನಾಡಿ, ಜೈನ ಸಂತರಿಂದ ಸಾಹಿತ್ಯ, ಸಂಸ್ಕೃತಿಯ ಮುಖಾಂತರ ಧರ್ಮ ಜಾಗೃತಿ ಆಗಿದೆ ಎಂದರು. 

ಕೇಸರಿ ರತ್ನರಾಜ್ ಶ್ರಮಣ ಸಂಸ್ಕೃತಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. 


ದಿನೇಶ್ ಕುಮಾರ್, ಆದರ್ಶ ಉಪಸ್ಥಿತರಿದ್ದರು. ಉಮಾನಾಥ ಶೆಣೈ ಸಂಪಾದಕತ್ವದ `ಅತಿಶಯ ಕ್ಷೇತ್ರ ನಲ್ಲೂರು ಕೃತಿಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ರತ್ನಾಕರರ್ವಿ ಪ್ರಶಸ್ತಿ ವಿಜೇತ ಗುಣಪಾಲ ಕಡಂಬ ಅವರನ್ನು ಸನ್ಮಾನಿಸಲಾಯಿತು. 

ವಕೀಲೆ ಶ್ವೇತಾ ಜೈನ್, ಪ್ರಭಾಚಂದ್ರ ಜೈನ್ ಮೂಡುಬಿದಿರೆ, ಸಂಪತ್ ಸಾಮ್ರಾಜ್ಯ, ಕೃಷ್ಣರಾಜ ಹೆಗ್ಡೆ, ಶಂಭವ ಕುಮಾರ್, ಶೈಲೇಂದ್ರ ಕುಮಾರ್, ವಜ್ರನಾಭ ಚೌಟ ನಲ್ಲೂರು, ಬಸದಿ ಮೊಕ್ತೇಸರರುಗಳಾದ ಪಟ್ಣಶೆಟ್ಟಿ ಸುಧೇಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್ ಉಪಸ್ಥಿತರಿದ್ದರು.


ಉಪನ್ಯಾಸಕಿ ಸುಜಾತ ಸ್ವಾಗತಿಸಿದರು. ನೇಮಿರಾಜ್ ನಿರೂಪಿಸಿದರು. 

--

Post a Comment

0 Comments