ಕಾಲೇಜಿನಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ : ಸಮಗ್ರ ತನಿಖೆಗೆ ಎನ್.ಎಸ್.ಯು.ಐ ಆಗ್ರಹ
ಮೂಡುಬಿದಿರೆ : ಇಲ್ಲಿನ ಆಳ್ವಾಸ್ ಕಾಲೇಜಿನಲ್ಲಿ ಮಾ.12 ರಂದು ಪ್ರಥಮ ಪಿಯುಸಿ ವಿದ್ಯಾರ್ಥಿ ಕೋಲಾರ ಮೂಲದ ಸಂಜಯ್ ಭುವನ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಆತ್ಮಹತ್ಯೆಯ ಬಗ್ಗೆ ಹಾಗೂ ಕಾಲೇಜಿನಲ್ಲಿ ನಡೆಯುತ್ತಿರುವ ಆತ್ಮಹತ್ಯೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಅವರ ನೇತೃತ್ವದ ತಂಡವು ಗುರುವಾರ ಆಗ್ರಹಿಸಿದೆ.
ಆಳ್ವಾಸ್ ನಲ್ಲಿ ಪದೇ ಪದೇ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು ಈ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು,ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸಬಾರದು,ಸೂಸೈಡ್ ಮಾಡಿಕೊಂಡ ವಿದ್ಯಾರ್ಥಿ ಮನೆಯವರಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಮೂಡುಬಿದಿರೆ ಇನ್ಸ್ ಪೆಕ್ಟರ್ ನಿತ್ಯಾನಂದ ಪಂಡಿತ್ ಅವರನ್ನು ಭೇಟಿಯಾಗಿ ಮನವಿ ನೀಡಿದೆ.
ಸಂಜಯ್ ಭುವನ್ ಪ್ರಥಮ ಪಿ.ಯು.ಸಿ.ವಿದ್ಯಾರ್ಥಿಯಾಗಿದ್ದ ಸಂಜಯ್ ಭುವನ್ ಹಾಸ್ಟೆಲ್ ನಲ್ಲಿ ಯಾರದ್ದೋ ಸಣ್ಣ ದುಡ್ಡು ತೆಗೆದಿದ್ದನೆಂದೂ,ಇದು ಆಡಳಿತ ಮಂಡಳಿಯವರಿಗೆ ಗೊತ್ತಾಗಿ ಆತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದೂ ಹೇಳಲಾಗುತ್ತಿದೆ.
ಹಣ ತೆಗೆದ ಆರೋಪದಲ್ಲಿ ಆಡಳಿತ ವರ್ಗದ ಯಾರಾದರೂ ಆತನಿಗೆ ಹಲ್ಲೆ ಮಾಡಿದ್ದರೋ,ಇದರಿಂದ ಮನನೊಂದ ಆತ ಆತ್ಮಹತ್ಯೆ ಮಾಡಿಕೊಂಡನೋ ಗೊತ್ತಿಲ್ಲ,ಆದರೆ ಒಂದು ವೇಳೆ ಹಲ್ಲೆ ನಡೆಸಿದ್ದು ಹೌದಾದರೆ ಆ ಸಿಬ್ಬಂಧಿಯನ್ನು ತಕ್ಷಣ ಸಸ್ಪೆಂಡ್ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಎನ್.ಎಸ್.ಯು.ಐ.ನ ವಿವಿಧ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments