ನೆಲ್ಲಿಕಾರು: ವಿವಿಧ ಸವಲತ್ತುಗಳ ವಿತರಣೆ
ಮೂಡುಬಿದಿರೆ: ಪಂಚಾಯತ್ ನಿಧಿ ೨ ಅನುದಾನದಲ್ಲಿ ಪ ಜಾತಿ , ಪ.ಪಂಗಡವರಿಗೆ ಮೀಸಲಿಟ್ಟ ಅನುದಾನದಲ್ಲಿ ವಿವಿಧ ಸವಲತ್ತುಗಳ ವಿತರಣಾ ಸಮಾರಂಭವು ಗುರುವಾರ ನೆಲ್ಲಿಕಾರು ಗ್ರಾಮ ಪಂಚಾಯತ್ ನಲ್ಲಿ ನಡೆಯಿತು.
ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪಂಚಾಯತ್ ವತಿಯಿಂದ ನೀಡಲಾಗುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿಗಳಾಗಿರಿ ಎಂದರು. ಸಹಾಯಕ ತೋಟಗಾರಿಕ ಅಧಿಕಾರಿ ಯುಗೇಂದ್ರ ಅತಿಥಿಯಾಗಿ ಭಾಗವಹಿಸಿ ತೋಟಗಾರಿಕಾ ಬೆಳೆಗಳ ಬಗ್ಗೆ ಹಾಗೂ ಮಿಶ್ರ ಬೆಳೆಗಳಿಂದ ಆಗುವ ಉಪಯೋಗ ಸಂಕ್ಷಿಪ್ತ ಮಾಹಿತಿ ನೀಡಿದರು.
ಪಂಚಾಯತ್ ಉಪಾಧ್ಯಕ್ಷೆ ಸುಶೀಲ, ಸದಸ್ಯರಾದ ಸಾಧು , ಲಲಿತ , ಮೋಹಿನಿ , ಪ್ರತಿಮ , ಜಯಂತ ಹೆಗ್ಡೆ , ಆಶಾಲತ , ಶಶಿಧರ ಎಂ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಶೆಟ್ಟಿ, ಕಾರ್ಯದರ್ಶಿ ದಾಮೋದರ ಉಪಸ್ಥಿತರಿದ್ದರು.
ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಿಬ್ಬಂದಿಗಳಾದ ರೇಣುಕ , ಲಕ್ಷ್ಮಣ , ಪ್ರಜ್ಞಾ ಸಹಕರಿಸಿದರು.
ಹೊಲಿಗೆ ಯಂತ್ರ , ಮರಣ ಸಾಂತ್ವನ, ವೈದ್ಯಕೀಯ ಚಿಕಿತ್ಸಾ ವೆಚ್ಚ , ಸಿಂಟೆಕ್ಸ್ ಟ್ಯಾಂಕ್ ವಿತರಣೆ ಮಾಡಲಾಯಿತು.
0 Comments