ಸಿಎಎ ಪೌರತ್ವ ಕಾನೂನು ವಿರೋಧಿಸಿ ಎಸ್ ಡಿ ಪಿ ಐ ನಿಂದ ರಾತ್ರೋ ರಾತ್ರಿ ಪ್ರತಿಭಟನೆ
ಮೂಡಬಿದಿರೆ 12: ಕೇಂದ್ರ ಸರಕಾರ ಸಿಎಎ ಜಾರಿ ಮಾಡಿದರ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದೇಶದಾದ್ಯಂತ ಕರೆ ನೀಡಿದ್ದ ಪ್ರತಿಭಟನೆಯ ಭಾಗವಾಗಿ ಮೂಡುಬಿದಿರೆಯ ಎಸ್ ಡಿ ಪಿ ಐ ಕಾರ್ಯಕರ್ತರು ಮಂಗಳವಾರ ರಾತ್ರಿ ರಸ್ತೆಗಿಳಿದು ಮೂಡಬಿದಿರೆ ಜಂಕ್ಷನ್ನಲ್ಲಿ ಪ್ರತಿಭಟನೆ ನಡೆಸಿದರು.
ಸಿಎಎ ಎಂಬುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು ಭಾರತದ ಜಾತ್ಯತೀತ ನಿಲುವನ್ನು ಇಲ್ಲದಾಗಿಸಿ,ಜಾತಿಗಳ ಮದ್ಯೆ ಕೋಮು ಮನಸ್ಥಿತಿಯನ್ನು ಬಿತ್ತಿ ಇದು ದೇಶವನ್ನು ಒಡೆದು ಅರಾಜಕತೆಯನ್ನು ಸೃಷ್ಟಿಸಿ ಆಂತರಿಕ ಗಲಬೆ ಹುಟ್ಟುಹಾಕಿ ಬರುವಂತ ಲೋಕಸಭೆ ಚುನಾವಣೆಯಲ್ಲಿ ಲಾಭವನ್ನು ಪಡೆದು ಅದಾನಿ, ಅಂಬಾನಿಗಳನ್ನು ರಕ್ಷಿಸಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತಿರ್ಪಾಗಿರುವ ಇಲೆಕ್ಟ್ರೋಲ್ ಬಾಂಡ್ ವಿಚಾರವನ್ನು ಮರೆಮಾಚಲು ಮಾಡಿರುವ ಷಡ್ಯಂತರದ ಭಾಗವಾಗಿದೆ. ಆದ್ದರಿಂದ ಇದನ್ನು ಒಪ್ಪುವಂತದ್ದಲ್ಲ ಆದ್ದರಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಲವಾಗಿ ವಿರೋಧಿಸುತ್ತದೆ ಎಂದು ಎಸ್ ಡಿ ಪಿ ಐ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರ ಅದ್ಯಕ್ಷ ಆಸೀಫ್ ಕೋಟೆ ಬಾಗಿಲು ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮೂಡುಬಿದಿರೆ ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್ ಮೂಡುಬಿದಿರೆ ಮಾತನಾಡಿ ಸಿಎಎ ವಿರುದ್ಧ ಇದು ಕೇವಲ ಸಾಂಕೇತಿಕ ಪ್ರತಿಭಟನೆಯಾಗಿದ್ದು ಸಿಎಎ ವಾಪಸು ಪಡೆಯದೆ ಇದ್ದರೆ ಮುಂದಿನ ದಿನಗಳಲ್ಲಿ ರಾತ್ರಿ ಹಗಲೆನ್ನದೆ ಉಗ್ರ ಹೋರಾಟವನ್ನು ಎಸ್ ಡಿ ಪಿ ಐ ಮಾಡಲಿದೆ ತಾವೆಲ್ಲರೂ ಎಲ್ಲಾ ರೀತಿಯ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.
ಪ್ರತಿಭಟನಾ ಸಭೆಯಲ್ಲಿ ಬ್ಲಾಕ್ ಕಾರ್ಯದರ್ಶಿ ಫಿರೋಜ್ ಖಾನ್,ಬ್ಲಾಕ್ ಉಪಾಧ್ಯಕ್ಷರಾದ ಆಸೀಫ್ ಮೂಡುಬಿದಿರೆ,ಜೊತೆ ಕಾರ್ಯದರ್ಶಿ ರವುಫ್ ಹಂಡೆಲ್ ,ಇಬ್ರಾಹಿಂ ಹಂಡೆಲ್, ಜಮಾಲ್ ಕೊಟೆ ಬಾಗಿಲು, ಶೇಹ್ರಾಜ್ ಮೊಹಲ್ಲಾ,ಆಸೀಫ್ ಹಂಡೆಲ್, ಅನ್ಸಫ್, ಬಷಿರ್ ಅಲಂಗರ, ಶಾಕೀರ್ ಹಂಡಲ್,ಬೂತ್ ಅದ್ಯಕ್ಷರು ಕಾರ್ಯದರ್ಶಿಗಳು,ಹಲವಾರು ಕಾರ್ಯಕರ್ತರು ಹಾಗೂ ನಾಗರಿಕರು ಉಪಸ್ಥಿತರಿದ್ದರು.
0 Comments