ಅಸಹಾಯಕರ ಮನೆಗೆ ತೆರಳಿ ಆಧಾರ್ ಅಪ್ಡೇಟ್ ಮಾಡಿದ ಅಂಚೆ ಇಲಾಖಾಧಿಕಾರಿಗಳು

ಜಾಹೀರಾತು/Advertisment
ಜಾಹೀರಾತು/Advertisment

 ಅಸಹಾಯಕರ ಮನೆಗೆ ತೆರಳಿ ಆಧಾರ್ ಅಪ್ಡೇಟ್ ಮಾಡಿದ ಅಂಚೆ ಇಲಾಖಾಧಿಕಾರಿಗಳು

ಮೂಡುಬಿದಿರೆ: ಮಿತ್ತಬೈಲು ಅಂಚೆ ಕಛೇರಿ ವ್ಯಾಪ್ತಿಯ ಪಾಲಡ್ಕ ಗ್ರಾಮದ ನಿವಾಸಿ ಉದಯ ಎಂಬ ತೀರಾ ಬಡ ಕುಟುಂಬದವರಾಗಿದ್ದಲ್ಲದೆ ವಿಶೇಷ ಚೇತನರಾಗಿದ್ದು ಇವರ ಆಧಾರ್ ಬಯೋಮೆಟ್ರಿಕ್ ಅಪ್ಡೇಷನ್ ಆಗದೆ ಬ್ಯಾಂಕ್ ನಲ್ಲಿ ಆಧಾರ್ ಸೀಡಿಂಗ್ ಆಗದೆ ಇದ್ದು ಇವರಿಗೆ ಬರುವ ಅಂಗವಿಕಲರ ವೇತನವು ಸ್ಥಗಿತಗೊಂಡಿರುತ್ತದೆ. 


  ವಿಕಲಚೇತನರಾಗಿರುವ ಉದಯ ಅವರಿಗೆ ಆಧಾರ್ ಸೆಂಟರ್ ಗೆ ಬಂದು ಆಧಾರ್ ಅಪ್ಡೇಟ್ ಮಾಡಲು ಅಸಾಧ್ಯವಾಗಿದ್ದು ಅಪ್ಡೇಟ್ ಮಾಡಲು ಅಂಚೆ ಕಚೇರಿಗೆ  ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿ ಶನಿವಾರ ಅಂಚೆ ಇಲಾಖೆಯವರು ಅವರ ಮನೆಗೆ ತೆರಳಿ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಮಾಡಿ ಸಹಕಾರ ನೀಡಿದರು. ಅಂಚೆ ಇಲಾಖೆಯ ಜನೋಪಯೋಗಿ ಕಾರ್ಯಕ್ಕೆ ಉದಯ ಅವರ ಮನೆಯವರು  ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ


ಅಂಚೆ ಸಿಬ್ಬಂದಿ ಅಶಕ್ತರ ಮನೆ ಭೇಟಿ ನೀಡಿ ಆಧಾರ್ ಅಪ್ಡೇಟ್

ಬೆಳ್ತಂಗಡಿ: ಗುರುವಾಯನಕೆರೆ ಅಂಚೆ ಕಛೇರಿ ವ್ಯಾಪ್ತಿಯಲ್ಲಿ , ವಾಸವಾಗಿರುವ ಶುಭಮ್ 19 ವರ್ಷ ವಯಸ್ಸಿನ, ಯುವಕ ಪೋಲಿಯೋ ಪೀಡಿತರಾಗಿದ್ದು, ಸಣ್ಣ ವಯಸ್ಸಿನಿಂದಲೇ ಶಾಶ್ವತವಾದ ಅಂಗವೈಕಲ್ಯನಾಗಿದ್ದು, ಇವರ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಆಗದೆ ಬ್ಯಾಂಕ್ ನಲ್ಲಿ ಆಧಾರ್ ಸೀಡಿಂಗ್ ಗೆ ಸಮಸ್ಯೆಯಾಗಿ ಇವರ ಅಂಗವಿಕಲರ ವೇತನವು ಸ್ತಗಿತಗೊಂಡಿತ್ತು. ಆದರೆ ಇವರನ್ನು ಸ್ಥಳೀಯ ಆಧಾರ್ ಸೆಂಟರ್ ಗೆ ಕರೆದುಕೊಂಡು ಹೋಗಲು ಅಸಾದ್ಯವಾದ ಕಾರಣ ಆತನ ಹೆತ್ತವರು ಹತ್ತಿರದ ಗುರುವಾಯನಕೆರೆ ಅಂಚೆ ಪಾಲಕರನ್ನು ಸಂಪರ್ಕಿಸಿ ಆಧಾರ್ ಅಪ್ಡೇಟ್ ಮಾಡಲು ಮನವಿ ಮಾಡಿಕೊಂಡಿದ್ದು, ಅಂಚೆ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಅವರ ಮನೆಗೆ ಭೇಟಿ ನೀಡಿ ಅವರ ಆಧಾರ್ ಅಪ್ಡೇಟ್ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದರು.


 ಮನೆಯವರು ಪಂಚಾಯತ್ ಗೆ ತಿಳಿಸಿದ್ದರೂ ಯಾರ ಸ್ಪಂದನೆಯು ಸಿಗದೇ ಇದ್ದಾಗ ಅಂಚೆ ಇಲಾಖೆಗೆ ಮನವಿ ಮಾಡಿಕೊಂಡಾಗ ತಕ್ಷಣವೇ ಅಂಚೆ ಇಲಾಖೆಯು ಸ್ಪಂದಿಸಿ ಅವರ ಮನೆಗೆ ಭೇಟಿ ನೀಡಿ ಅಪ್ಡೇಟ್ ಮಾಡಿಸಿದಾಗ ಅವರ ಕುಟುಂಬವು ಮನಸ್ಪೂರ್ವಕವಾಗಿ ಅಂಚೆ ಇಲಾಖೆಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. 

 ಪುತ್ತೂರು ಅಂಚೆ ಇಲಾಖೆಯ ಮಾರ್ಕೆಟಿಂಗ್ ಆಫೀಸರ್ ಗುರುಪ್ರಸಾದ್, ಬೆಳ್ತಂಗಡಿ ಸಿಸ್ಟಮ್‌ ಅಡ್ಮಿನ್ ಉಮೇಶ್ ಹಾಗೂ ಚಂದ್ರಿಕಾ ಗುರುವಾಯನಕೆರೆ ಈ ಸಂದರ್ಭದಲ್ಲಿದ್ದರು..

Post a Comment

0 Comments