ಮೂಡಬಿದ್ರೆ ಪುರಸಭೆ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ* ವತಿಯಿಂದ *ವಿಕಲಚೇತನರ ಅರಿವು ನೆರವು ಕಾರ್ಯಕ್ರಮ

ಜಾಹೀರಾತು/Advertisment
ಜಾಹೀರಾತು/Advertisment

 ದಿನಾಂಕ : 09/02/2024 *ಮೂಡಬಿದ್ರೆ ಪುರಸಭೆ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ*  ವತಿಯಿಂದ *ವಿಕಲಚೇತನರ ಅರಿವು ನೆರವು ಕಾರ್ಯಕ್ರಮ* ವನ್ನು ಮೂಡಬಿದಿರೆಯ ಸಮಾಜ ಮಂದಿರದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. 


ತಿಂಗಳೊಳಗೆ ಫೋಷಣಾ ಭತ್ತೆ ಬಿಡುಗಡೆ- ಇಂದು ಎಂ.

ಮೂಡುಬಿದಿರೆ: ಪುರಸಭೆ ನಿಧಿಯಿಂದ ವಿಕಲ ಚೇತನರಿಗೆ ಮತ್ತು ಅಂಗವಿಕಲರಿಗೆ ವಾರ್ಷಿಕ ರೂ. 6000 ಪೋಷಣಾ ಭತ್ತೆ ನೀಡಲಾಗುತ್ತಿದ್ದು ನಗರೋತ್ಥಾನ ಯೋಜನೆಯಡಿ ಇಟ್ಟಿರುವ ಒಂದು ತಿಂಗಳೊಳಗೆ ಬಿಡುಗಡೆ ಮಾಡಿ ಫಲಾನುಭವಿಗಳಿಗೆ ಪೋಷಣಾ ಭತ್ತೆ ವಿತರಿಸಲಾಗುವುದು ಎಂದು ಮೂಡುಬಿದಿರೆ ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ತಿಳಿಸಿದರು.

ಮೂಡುಬಿದಿರೆ ಪುರಸಭೆಯ ವತಿಯಿಂದ ಅಂಗವಿಕಲ ಇಲಾಖೆ ಸಹಯೋಗದಲ್ಲಿ ನಡೆದ ಆರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಪ್ರಕಾಶ್ ಶೆಟ್ಟಿಗಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಮಂಗಳೂರು ಎಂಡೋಸಲ್ಫಾನ್ ಘಟಕದದ ಜಿಲ್ಲಾ ಸಂಯೋಜಕರಾದ ಸಜಿವುದ್ದೀನ್ ಎಂ.ಸ್ ಅವರು ಎಂಡೋಸಲ್ಫಾನ್ ಪೀಡಿತರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ನಟರಾಜ್ ಅವರು ಆರೋಗ್ಯ ಮಾಹಿತಿ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸುಶೀಲ ಹೆಗ್ಡೆಯವರು ಬುದ್ದಿ ಮಟ್ಟ ಕಮ್ಮಿ ಇರುವ ಮಕ್ಕಳನ್ನು ಶಾಲೆಗಳಲ್ಲೇ ಗುರುತಿಸಿ ಅವರಿಗೆ ಜಿಲ್ಲಾಸ್ಪತ್ರೆಯಿಂದ ವಿಕಲ ಚೇತನರ ಗುರುತು ಚೀಟಿಯನ್ನು ನೀಡುವ ವ್ಯವಸ್ಥೆಯಿದೆ ಎಂದರು ಜೊತೆಗೆ ಸಮನ್ವಯ ಶಿಕ್ಷಣದ ಅಡಿಯಲ್ಲಿ 6-16 ವರ್ಷದವರೆಗೆ ಪ್ರತಿಯೊಬ್ಬರು ಶಿಕ್ಷಣದಿಂದ ವಂಚಿತರಾಗಬಾರದು ಎಂದು ತಿಳಿಸಿದರು. ಮೂಡುಬಿದಿರೆ ಪುರಸಭೆಯ ನಗರ ಪುನರ್ವಸತಿ ಕಾರ್ಯಕರ್ತೆ ಸವಿತಾ ಅವರು ಸಂಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ (MRW) ಜಯಪ್ರಕಾಶ್ ಕುಲಾಲ್ ರವರು ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು ಹಾಗೆ ವಿಕಲಚೇತನರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು. ಕಾರ್ ಸ್ಟ್ರೀಟ್ ನ ದಯಾನಂದ ಪೈ ಸತೀಶ್ ಪೈ ಕಾಲೇಜಿನ ಸಮಾಜ ಶಾಸ್ತ್ರ ವಿದ್ಯಾರ್ಥಿನಿ ರಮ್ಯಾ ವಂದಿಸಿದರು.

Post a Comment

0 Comments