ಮಂಗಳೂರು ಸಂಸದರ ಮತ್ತೊಂದು ಮನವಿಗೆ ಕೇಂದ್ರ ಮನ್ನಣೆ: ಸಂಸದರಿಗೆ ಪತ್ರ ಬರೆದು ಅನುದಾನ ಘೋಷಿಸಿದ ನಿತಿನ್ ಗಡ್ಕರಿ

 ಮಂಗಳೂರು ಸಂಸದರ ಮತ್ತೊಂದು ಮನವಿಗೆ ಕೇಂದ್ರ ಮನ್ನಣೆ: ಸಂಸದರಿಗೆ ಪತ್ರ ಬರೆದು ಅನುದಾನ ಘೋಷಿಸಿದ ನಿತಿನ್ ಗಡ್ಕರಿ

ರಾಷ್ಟ್ರೀಯ ಹೆದ್ದಾರಿ-73 ರ ಮಂಗಳೂರು- ಮೂಡಿಗೆರೆ-ತುಮಕೂರು ವಿಭಾಗದ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ 10.8 ಕಿ.ಮೀ.ಉದ್ದದ ಪೇವ್ದ್ ಶೋಲ್ಡರ್ ನೊಂದಿಗೆ  ದ್ವಿಪಥ ರಸ್ತೆಯಾಗಿ ಅಗಲೀಕರಣ ಕಾಮಗಾರಿಗೆ ಇಪಿಸಿ ಆಧಾರದಲ್ಲಿ ಅನುಮೋದನೆ ನೀಡಿ ಕಾಮಗಾರಿ


ಯನ್ನು ಕೈಗೆತ್ತಿಕೊಳ್ಳುವುದಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರು ದಕ್ಷಿಣ ಕನ್ನಡ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ರವರಿಗೆ ಪತ್ರ ಬರೆದು ತಿಳಿಸಿರುತ್ತಾರೆ. 

 2023-24ನೇ ಸಾಲಿನ ವಾರ್ಷಿಕ ಯೋಜನೆಯಡಿಯಲ್ಲಿ ಸುಮಾರು ರೂ. 343.74 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ರಸ್ತೆಯು ರಸ್ತೆ ಬಳಕೆದಾರರಿಗೆ ಉತ್ತಮ ರಸ್ತೆ ಸಂಪರ್ಕವನ್ನು ಒದಗಿಸಲಿದ್ದು,  ಜಿಲ್ಲೆಯ  ಆರ್ಥಿಕ ಬೆಳವಣಿಗೆಗೆ ಅಗತ್ಯವಾದ ಬೆಂಬಲವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಜಿಲ್ಲೆಗೆ ಮಹತ್ವದ ಹೆದ್ದಾರಿ ಯೋಜನೆಗಳನ್ನು ನೀಡಿರುವ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರಿಗೆ ಹಾಗೂ  ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರಿಗೆ ದಕ್ಷಿಣ ಕನ್ನಡ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ರವರು ಕೃತಜ್ಞತೆ ಸಲ್ಲಿಸಿದ್ದಾರೆ.

Post a Comment

0 Comments

Advertisement