ಮಾಡದಂಗಡಿ ಶಾಲೆಗೆ ಧರ್ಮಸ್ಥಳ ಗ್ರಾ.ಯೋಜನೆಯಿಂದ ರೂ. 1 ಲಕ್ಷ ಸಹಾಯಧನ
ಮೂಡುಬಿದಿರೆ: ಬೆಳ್ಳಿಹಬ್ಬ ಸಂಭ್ರಮ ಪೂರೈಸಿರುವ ವಾಲ್ಪಾಡಿ ಮಾಡದಂಗಡಿ ಶಾಲೆಯ ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರೂ. ಒಂದು ಲಕ್ಷ ಸಹಾಯಧನ ಮಂಜೂರುಗೊಳಿಸಿದ್ದಾರೆ.
ಯೋಜನೆಯ ಶಿರ್ತಾಡಿ ವಲಯ ಮೇಲ್ವಿಚಾರಕಿ ಶಿವಲಕ್ಷ್ಮಿ ಅವರು ಇಂದು ಶಾಲೆಗೆ ಭೇಟಿ ನೀಡಿ ಮುಖ್ಯೋಪಾಧ್ಯಾಯಿನಿ ವಾಣಿಶ್ರೀ ಅವರಿಗೆ ಮಂಜೂರು ಪತ್ರ ನೀಡಿದರು.
ಸೇವಾ ಪ್ರತಿನಿಧಿಗಳಾದ ಸುಶೀಲ, ಸುಜಾತ, ಸಹ ಶಿಕ್ಷಕಿ ರಶ್ಮಿ ಎಮ್.ಎಸ್. ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷ ಅಶ್ರಫ್ ವಾಲ್ಪಾಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments