ಮಾಂಟ್ರಾಡಿ ಶಾಲೆಯಲ್ಲಿ ಸಾಂಸ್ಕೃತಿಕ ಕಲರವ
ಮೂಡುಬಿದಿರೆ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಾಂಟ್ರಾಡಿ ಇದರ ವತಿಯಿಂದ 'ಸಾಂಸ್ಕೃತಿಕ ಕಲರವ' ಕಾರ್ಯಕ್ರಮವು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಜೇಶ ಮಡಿವಾಳ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ದ ಕ ಜಿಲ್ಲಾ ಪಂಚಾಯತ್ *ಕನ್ನಡ ಮತ್ತು ಸಂಸ್ಕೃತಿ ಇಲಾಖೆ* ಅನುದಾನದಡಿ ರಚನೆ ಗೊಂಡ 1954 ರಲ್ಲಿ ಈ ಭಾಗದಲ್ಲಿ ಸರಕಾರಿ ಶಾಲೆ ನಿರ್ಮಾಣವಾಗಲು ಸಹಕಾರಿಯಾದ ಸ್ವರ್ಗೀಯ ಕೊಂಬೆಟ್ಟು ಗುತ್ತು ನಾಗರಾಜ ಹೆಗ್ಡೆ ಇವರ ಸ್ಮರಣಾರ್ಥ ವಾಗಿ ನಿರ್ಮಿಸಿರುವ ಬಯಲು ರಂಗ ಮಂದಿರವನ್ನು ಪುತ್ರರಾದ ರಘುಚಂದ್ರ ಜೈನ್ ಮತ್ತು ನಿವೃತ್ತ ಮುಖ್ಯ ಶಿಕ್ಷಕ ಬಾಹುಬಲಿ ಇವರು ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ನೆಲ್ಲಿಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಪೂಜಾರಿ ಇವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಮಕ್ಕಳ ಕಲಿಕೆಯ ಜತೆ ಬೌದ್ಧಿಕ ಶಿಕ್ಷಣ ಪಡೆಯಲು ಸಾಂಸ್ಕೃತಿಕ ಕಲರವ ಉತ್ತಮ ವೇದಿಕೆ ಎಂದು ಶುಭ ಹಾರೈಸಿದರು.
ಕ್ವಾರಿ ಮಾಲಿಕರ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಇಂಗ್ಲಿಷ್ ವ್ಯಾಮೋಹದಿಂದಾಗಿ ಕನ್ನಡ ಮಾಧ್ಯಮ ದಿಂದ ವಿಮುಖರಾಗುವ ಈ ಹೊತ್ತಿನಲ್ಲಿ ಮಾಂಟ್ರಾಡಿ ಶಾಲೆಯು ಉತ್ತಮ ದಾಖಲಾತಿ ಹೊಂದಿದೆ ಇದಕ್ಕಾಗಿ ಪೋಷಕರಿಗೆ ಅಭಿನಂದಿಸಿದ ಅವರು ಈ ಶಾಲೆಯಿಂದ ಕಲಿತವರು ಬಹಳಷ್ಟು ಮಂದಿ ಉನ್ನತ ಹುದ್ದೆಗೇರಿ ಶಾಲೆಗೆ ಕೀರ್ತಿ ತಂದಿರುವರು ಇದೇ ಮಾದರಿಯಲ್ಲಿ ನಮ್ಮ ಮಕ್ಕಳನ್ನೂ ಕೂಡಾ ಇದೇ ರೀತಿ ಬೆಳೆಸಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ. ಸರ್ಕಾರವು ಸರಕಾರಿ ಶಾಲೆಗಳ ಉಳಿವಿಗಾಗಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಇರುವುದರಿಂದ ಮಕ್ಕಳು ಸದುಪಯೋಗ ಪಡೆಯಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಸುಶೀಲ, ಸದಸ್ಯರಾದ ಶಶಿಧರ್ ಎಂ.,ಅಣ್ಣಿ ಪೂಜಾರಿ , ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದಯ್ಯ ಪೂಜಾರಿ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಸುರೇಖಾ , ಪ್ರಶಾಂತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತಿ ಇದ್ದರು.
ಪ್ರಭಾರ ಮುಖ್ಯ ಶಿಕ್ಷಕಿ ಮೃದುಲಾ ಸ್ವಾಗತಿಸಿದರು. ಶಿಕ್ಷಕಿ ಜೆನೆಟ್ ಲೋಬೊ ಮತ್ತು ಪಂಚಾಯತ್ ಸಿಬ್ಬಂದಿ ಪ್ರಶಾಂತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಪ್ರತಿಮಾ ನಾಯ್ಕ ವಂದಿಸಿದರು. ಸಹ ಶಿಕ್ಷಕ ಸಿದ್ದಪ್ಪ, ಗೌರವ ಅತಿಥಿ ಶಿಕ್ಷಕಿಯವರಾದ ಸಾಭಿರಾ ಬಾನು , ಸುಮಲತ, ಶ್ರುತಿ ,ರೂಪಲತ , ಅಂಗನವಾಡಿ ಶಿಕ್ಷಕಿ ಅರುಣ ಸಹಾಯಕಿ ಪ್ರಮೀಳ ರವರು ಸಹಕರಿಸಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕರಾದ ಉಮಾನಾಥ ಎ ಕೋಟ್ಯಾನ್ ಆಗಮಿಸಿ ಶುಭ ಹಾರೈಸಿದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕಿರವರು ಹೆಚ್ಚುವರಿ ಕೊಠಡಿ ಕೋರಿ ಮನವಿ ಸಲ್ಲಿಸಿದರು.
0 Comments