ಬೇಜಿಲ್ ಮೆಂಡಿಸ್ ಸ್ಮರಣಾರ್ಥ ಆರೈಕೆ,ವೃದ್ದಾರೋಗ್ಯ ಆರೈಕಾ ಕೇಂದ್ರ ಉದ್ಘಾಟನೆ
ಮೂಡುಬಿದಿರೆ: ಭೂಮಿಯಲ್ಲಿ ಉಪ್ಪಿನಂತೆ ಪ್ರಪಂಚಕ್ಕೆ ಬೆಳಕಿನಂತಿರಬೇಕು ಎಂಬ ಬೈಬಲ್ ವಾಕ್ಯದಂತೆ ಆರೋಗ್ಯ ಕ್ಷೇತ್ರದಲ್ಲಿ ಸೇವೆಯ ಮೂಲಕ ಹೊಸ ಬೆಳಕು ಎಲ್ಲೆಲ್ಲೂ ಪ್ರಜ್ವಲಿಸಲಿ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಪೀಟರ್ ಪೌಲ್ ಸಲ್ಡಾನಾ ನುಡಿದರು. ಅಲಂಗಾರಿನ ಹೆಲ್ರ‍್ಸ್ ಆಫ್ ಮೌಂಟ್ ರೋಜರಿ ಸಭೆಯ ಧರ್ಮಭಗಿನಿಯರ ಮೌಂಟ್ ರೋಜರಿ ಆಸ್ಪತ್ರೆ ವಠಾರದಲ್ಲಿ ದಿ.ಬೇಜಿಲ್ ಮೆಂಡಿಸ್ ಸ್ಮರಣಾರ್ಥ ಉಪಶಾಮಕ ಆರೈಕೆ, ವೃದ್ದಾರೋಗ್ಯ ಆರೈಕಾ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಮೊನ್ಸಿಂಜರ್ ಎಡ್ರಿನ್ ಸಿ ಪಿಂಟೊ ಅವರು ದಿವಂಗತ ಬೇಜಿಲ್ ಮೆಂಡಿಸ್ ತನ್ನ ಜೀವನಾವಧಿಯಲ್ಲಿ ಮಾಡಿದ ಉನ್ನತ ಸಮಾಜಸೇವೆಗಳನ್ನು ಸ್ಮರಿಸಿ, ಅವರು ಕಲಿಸಿಕೊಟ್ಟ ಜೀವನದ ಮೌಲ್ಯಗಳನ್ನು ನೆನಪಿಸಿ, ಅವರ ಸವಿನೆನಪಿಗಾಗಿ, ಅವರ ಧರ್ಮಪತ್ನಿ ಮ್ಯಾಗ್ಗಲಿನ್ ಮೆಂಡಿಸ್ ಮತ್ತು ಅವರ ಮಕ್ಕಳ ಮುತುವರ್ಜಿಯಲ್ಲಿ ಮೆಂಡಿಸ್ ಕುಟುಂಬದ ಈ ಉದಾರ ಮನಸ್ಸಿನ ಕೊಡುಗೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.
ಮೆಂಡಿಸ್ ಕುಟುಂಬದ ಪರವಾಗಿ ಮ್ಯಾಕ್ಸಿಂ ಮೆಂಡಿಸ್ ಮಾತಾನಾಡಿ, ತನ್ನ ತಂದೆಯ ಜೀವನದ ಉನ್ನತ ಧಾನ ಧರ್ಮದ ಮೌಲ್ಯಗಳ ಸ್ಮರಣಾರ್ಥ ಈ ಆರೈಕೆ ಕೇಂದ್ರ ಸ್ಮರಣೆ, ಪ್ರೇರಣೆಗೆ ಸಾಕ್ಷಿಯಾಗಿದೆ. ಇಲ್ಲಿ ಬಹಳಷ್ಟು ರೋಗಿಗಳಿಗೆ, ವೃದ್ಧರಿಗೆ ಪ್ರೀತಿಯ ಹಾಗೂ ಸಾಂತ್ವನದ ಆರೈಕೆ ಲಭಿಸಲಿ ಎಂದು ಆಶಿಸಿದರು.
ಮೊನ್ಸಿಂಜೊರ್ ಎಡ್ವಿನ್ ಸಿ ಪಿಂಟೊ ಹಾಗೂ ಮ್ಯಾಗ್ಧಲಿನ್ ಮೆಂಡಿಸ್ ನೂತನ ಆರೈಕೆ ಕೇಂದ್ರವನ್ನು ಉದ್ಘಾಟಿಸಿದರು. ಮೆಂಡಿಸ್. ಕುಟುಂಬದ ಎಲ್ಲಾ ಸದಸ್ಯರು ನಾಮಫಲಕವನ್ನು ಅನಾವರಣಗೊಳಿಸಿದರು. ಹೆಲ್ರ‍್ಸ್ ಆಫ್ ಮೌಂಟ್ ರೋಜರಿ ಸಭೆಯ ಸಿಸ್ರ‍್ಸ್ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.
ಮೂಡುಬಿದಿರೆ ಸಹಕಾರಿ ಸೊಸೈಟಿಯ ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಮೆಂಡಿಸ್ ಕುಟುಂಬದ ಉದಾರತೆಯನ್ನು, ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ, ಹಾಗೂ ಇನ್ನಿತರ ಅಗತ್ಯಗಳಿಗೆ ಅವರ ಸ್ಪಂದನೆಯನ್ನು ನೆನಪಿಸಿ, ''ಪರೋಪಕಾರವೇ ಪುಣ್ಯ ಎಂದರು. ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ನಿರ್ದೇಶಕ ಜಾರ್ಜ ಮೋನಿಸ್ , ಪುರಸಭಾ ಸದಸ್ಯ ಪಿ.ಕೆ ಥೋಮಸ್, ವಾಲ್ಪರ್ ಮತ್ತು ಎಪಿ.ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು. ಸುಪೀರಿಯರ್ ಜನರಲ್ ಸಿಸ್ಟರ್ ಸುನೀತಾ ಡಿ''ಸೋಜ ಸ್ವಾಗತಿಸಿ ವಂದಿಸಿದರು.
0 Comments