ಮೂಡುಬಿದಿರೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವ
ಮೂಡುಬಿದಿರೆ : ಗಣರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತಗೊಳಿಸದೆ ನಮ್ಮ ಹಿರಿಯರು ಮಾಡಿದ ತ್ಯಾಗ, ಬಲಿದಾನಗಳನ್ನು ನೆನಪಿಟ್ಟುಕೊಳ್ಳಬೇಕು. ನಮ್ಮ ಭಾರತೀಯ ಸ೦ಸ್ಕೃತಿ ಜಗತ್ತನ್ನೇ ಒಂದು ಕುಟುಂಬವೆಂದು ಭಾವಿಸುವ ವಸುಧೈವ ಕುಟುಂಬಕಂ ತತ್ವವನ್ನು ಒಳಗೊಂಡಿದೆ. ಆ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ಲೆಕ್ಕ ಪರಿಶೋಧಕ ಉಮೇಶ ರಾವ್ ಮಿಜಾರ್ ಹೇಳಿದರು.
ಅವರು ಮೂಡುಬಿದಿರೆ ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣಗೈದು ಮಾತನಾಡಿದರು.
ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನ ನಮ್ಮ ಹಿರಿಯರು ನಮಗೆ ನೀಡಿದ ಕೊಡುಗೆಯಾಗಿದ್ದು ಅದನ್ನು ನಾವು ಜಾಗರೂಕತೆಯಿ೦ದ ಕಾಪಾಡಿಕೊಳ್ಳಬೇಕೆಂದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಮತ್ತು ಸಮಾಜ ಸೇವೆಯನ್ನು ಜಾಗ್ರತಗೊಳಿಸಲು ಸ೦ಸ್ಥೆಯಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ರೋವರ್ಸ್ ಮತ್ತು ರೇ೦ಜರ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ಮೊದಲಾದ ವಿಂಗ್ ಗಳು ಹೊ೦ದಿದ್ದು ಬಹಳ ಚಟುವಟಿಕೆಯಿ೦ದ ಕೆಲಸ ನಿರ್ವಹಿಸುತ್ತಿವೆ. ಗಣರಾಜ್ಯೋತ್ಸವದ ಅಂಗವಾಗಿ ನಾಗರೀಕರಿಗೆ ಸ್ವಚ್ಛತೆಯ ಅರಿವನ್ನು ಮೂಡಿಸಲು ಸ೦ಸ್ಥೆಯ ವಿವಿಧ ಸ೦ಘಗಳ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಸಂಘಟನೆಗಳು ಒಟ್ಟಾಗಿ ಎರಡು ದಿನಗಳ ಕಾಲ ಮೂಡುಬಿದಿರೆಯಿಂದ ವೇಣೂರಿನವರೆಗೆ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊ೦ಡಿದೆ ಎಂದರು.
ಪ್ರಾ೦ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ಉಪಸ್ಥಿತರಿದ್ದರು. ವಿಕ್ರಮ ನಾಯಕ್ ಕಾರ್ಯಕ್ರಮ ನಿರೂಪಿಸಿ ವ೦ದಿಸಿದರು.
0 Comments