ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಸಾಂಸ್ಕೃತಿಕ ಸಂಭ್ರಮ

ಜಾಹೀರಾತು/Advertisment
ಜಾಹೀರಾತು/Advertisment

 ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಸಾಂಸ್ಕೃತಿಕ ಸಂಭ್ರಮ 


ಮೂಡುಬಿದಿರೆ: ಆಕರ್ಷಣೆಗಳಿಗೆ ಬಲಿಬೀಳದೆ ಅವಶ್ಯಕತೆಗಳನ್ನು ಅರ್ಥೆಸಿಕೊಂಡು ಬಲ್ಲವರಿಂದ ಸಂಸ್ಕಾರ ಸಂಸ್ಕೃತಿ ಪರಂಪರೆಗಳ ಒಳ ಹೊರಗನ್ನು ತಿಳಿದುಕೊಂಡು ಮುನ್ನಡೆಯುವ ಕುಶಲಿಗರಾಗಬೇಕು. ಪ್ರದು ವಿದ್ಯಾರ್ಥಿಯೂ ಭವಿಷ್ಯಕ್ಕೆ ಭಾಗ್ಯವಾಗಬಲ್ಲ ತಂದೆ, ತಾಯಿ, ಗುರುವಿನಿಂದ ತಿಳಿದ ಜ್ಞಾನ ಪಡೆದುಕೊಂಡು ಸಮಾಜ ಮುಖಿಗಳಾಗಿ, ದೇಶದ ಸಂಪತ್ತು ಆಗಬೇಕು ಎಂದು ಮಂಗಳೂರು ಶಕ್ತಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಕೊಡಿಪ್ಪಾಡಿ ಚಂದ್ರಶೇಖರ ನಾÊಕ್ ಹೇಳಿದರು. 


ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ವಾರ್ಷಿಕ ಸಾಂಸ್ಕöÈತಿಕ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.

ಜರ್ಮನಿಯಲ್ಲಿ ಮರ್ಸಿಡಿಸ್ ಬೆಂಜ್ ಐಟಿ ಪ್ರಾಡಕ್ಟ್ ಮೆನೇಜರ್, ಹಳೇ ವಿದ್ಯಾರ್ಥಿ ಸಮ್ಮೇದ್ ಜೈನ್ ಮುಖ್ಯ ಅತಿಥಿಯಾಗಿ ಮಾತನಾಡಿ, ತಂತ್ರಜ್ಞಾನದ ಸಮರ್ಪಕ ಬಳಕೆಯೊಂದಿಗೆ ಮೌಲ್ಯಗಳ ಸೂತ್ರಗಳೊಂದಿಗೆ ಮುಂದುವರಿದರೆ ಪ್ರತಿಯೋರ್ವನ ನಡೆಗಳು ದೀಪ ನಡೆಗಳಾಗುತ್ತದೆ. ಏಕಾಗ್ರತೆ, ದೃಷ್ಟಿಕೋನ, ನಿರಂತರ ಅಭ್ಯಾಸ, ಅಧ್ಯಯನಶೀಲತೆ, ಪ್ರಯೋಗಶೀಲತೆಗಳೊಂದಿಗೆ ವಿದ್ಯಾರ್ಥಿಯ ಜೀವನ ವಿಕಾಸಗೊಳ್ಳುತ್ತದೆ ಎಂದರು.

ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ  ಜ್ಞಾನ, ಬದ್ಧತೆ, ಕೌಶಲ್ಯಗಳ ತ್ರಿಕೋನ ಸೂತ್ರಗಳೊಂದಿಗೆ ತೊಡಗಿಸಿಕೊಂಡರೆ ನಮ್ಮ ಬದುಕು ವರ್ಣರಂಜಿತವಾಗುತ್ತದೆ. ಸಾರ್ಥಕ್ಯದ ಗುರಿಗಳೊಂದಿಗೆ ನಾವು ಮುನ್ನಡೆದಾಗ ಮಾತ್ರ ಯಶಸ್ಸು ಸಾಧ್ಯ. ಸಾಧನೆಯ ತುಡಿತ ಕನಸುಗಳನ್ನು ಸಾಕಾರಗೊಳಿಸುತ್ತದೆ ಎಂದರು.

ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಬಿ.ಪಿ ಸಂಪತ್‌ಕುಮಾರ್, ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. 

ಕಾರ್ಯದರ್ಶಿ ರಶ್ಮಿತಾ ಜೈನ್ ಸ್ವಾಗತಿಸಿದರು. ಪ್ರಾಂಶುಪಾಲ ಪ್ರದೀಪ್ ಶೆಟ್ಟಿ ವಂದಿಸಿದರು. ಉಪನ್ಯಾಸಕ ಡಾ.ವಾದಿರಾಜ ಕಲ್ಲೂರಾಯ ನಿರೂಪಿಸಿದರು.

Post a Comment

0 Comments