ಗ್ರಾಮಾಭಿವೃದ್ಧಿ ಯೋಜನೆಯ ನೂತನ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಗಾರ

ಜಾಹೀರಾತು/Advertisment
ಜಾಹೀರಾತು/Advertisment

 ಗ್ರಾಮಾಭಿವೃದ್ಧಿ ಯೋಜನೆಯ ನೂತನ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಗಾರ



ಮೂಡುಬಿದಿರೆ: ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಆಲಂಗಾರು ವಲಯದ ನೂತನ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರವು ಗುರುವಾರ ಬನ್ನಡ್ಕ ರಾಘವೇಂದ್ರ ಮಠದ ಸಭಾಭವನದಲ್ಲಿ ನಡೆಯಿತು.

  ಗ್ರಾಮಾಭಿವೃದ್ಧಿ ಯೋಜನೆಯ  ಉಡುಪಿ ಕರಾವಳಿ ಪ್ರಾದೇಶಿಕ ನೀರ್ದೇಶಕರಾಗಿರುವ ದುಗ್ಗೇಗೌಡ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ತಂಡಗಳು ಹೇಗಿರಬೇಕು, ಪದಾಧಿಕಾರಿಗಳಿಗಿರುವ ಜವಾಬ್ದಾರಿಯ ಬಗ್ಗೆ ತಿಳಿಸಿದರು.

ಪದವೀಧರ ಶಿಕ್ಷಕ ಗುರು ಎಂ.ಪಿ.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ನಾಯಕತ್ವದ ಬಗ್ಗೆ ಮಾಹಿತಿ ನೀಡಿದರು.

 ಪ್ರಾದೇಶಿಕ ಕಛೇರಿಯ ಯೋಜನಾಧಿಕಾರಿ ರೂಪಾ ಜೈನ್, ಯೋಜನಾಧಿಕಾರಿ ಸುನೀತಾ, ಜಿಲ್ಲಾ ಪ್ರಬಂಧಕರು ಸುಬ್ರಾಯ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

  ಮೇಲ್ವೀಚಾರಕ ವಿಠಲ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments