ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ‌ ತಾಲೂಕು ಮಟ್ಟದ ಸಭೆ

ಜಾಹೀರಾತು/Advertisment
ಜಾಹೀರಾತು/Advertisment

 ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ‌ ತಾಲೂಕು ಮಟ್ಟದ ಸಭೆ



ಮೂಡುಬಿದಿರೆ:ಕಳೆದ ೪೦ ವರ್ಷಗಳಿಂದ ಜಿಲ್ಲೆಯ ಕಡಲ್ಕೊರೆತ ನಿಯಂತ್ರಣಕ್ಕೆ ಸರಕಾರ ಕೋಟಿಗಟ್ಟಲೆ ಹಣ ವಿನಿಯೋಗಿಸಿದರೂ ಹಣ ಪೋಲಾಗಿದೆ ಹೊರತು ಪರಿಹಾರ ಸಿಕ್ಕಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಸಿಗಬೇಕೆಂಬ ಉದ್ದೇಶದಿಂದ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಮ್ಮ ಸಮಿತಿ ಮನವಿ ಸಲ್ಲಿಸಿದ್ದು ಆಂದೋಲನ ಮುಂದುವರಿಯಲಿದೆ ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸ್ಥಾಪಕ ಅಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ ಹೇಳಿದರು.


ಶನಿವಾರ ಇಲ್ಲಿನ ಪಂಚರತ್ನ ಹೋಟೆಲ್‌ನಲ್ಲಿ ನಡೆದ ಸಮಿತಿಯ ತಾಲೂಕು ಮಟ್ಟದ  ಸಭೆಯನ್ನುದ್ದೇಶಿಸಿ ಮಾತನಾಡಿದರು. ವಿದ್ಯುತ್ ಸ್ಥಾವರಗಳು ಸೇರಿದಂತೆ ಪರಿಸರಕ್ಕೆ ಯೋಗ್ಯವಾದ ಕೈಗಾರಿಕೆಗಳು ಜಿಲ್ಲೆಗೆ ಬರಬೇಕು. ಇದರಿಂದ ಉದ್ಯೋಗ ಸೃಷ್ಟಿಯಾಗಿ ಜಿಲ್ಲೆ ಹಾಗೂ ರಾಜ್ಯದ ಪ್ರಗತಿಗೆ ನೆರವಾಗುತ್ತದೆ. ಭೂಸಂತ್ರಸ್ಥರಿಗೆ ವೈಜ್ಞಾನಿಕ ಪರಿಹಾರವನ್ನು ಸರಕಾರ ನೀಡುವುದರ ಜತೆಗೆ ಕುಟುಂಬಕ್ಕೊಂದು ಉದ್ಯೋಗವನ್ನು ಕೊಡಬೇಕು. ಕೈಗಾರಿಕೆಗಳು ಅಭಿವೃದ್ಧಿಯಾದಾಗ ಮಾತ್ರ ದೇಶ ಪ್ರಗತಿಯನ್ನು ಕಾಣಲು ಸಾಧ್ಯ   ಎಂದರು. 


ಸಮಿತಿಯ ದ.ಕ ಜಿಲ್ಲಾಧ್ಯಕ್ಷ ಡಿ.ಆರ್ ರಾಜು ಮಾತನಾಡಿ ಸರಕಾರ ಅದರದ್ದೆ ಆದ ಕೆಲಸಗಳನ್ನು ಮಾಡುತ್ತಿದ್ದರೆ ನಾಗರಿಕರಾಗಿ ನಮ್ಮ ಜವಬ್ದಾರಿಯಯನ್ನು ನಾವು ಮರೆಯುವಂತಿಲ್ಲ. ನೆಲ. ಜಲ ಉಳಿಸಿ ಉದ್ದಿಮೆಗಳನ್ನು ನಾವು ಪ್ರೋತ್ಸಾಹಿಸಬೇಕು ಎಂದರು.

ಸಮಿತಿ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಾಗಿರುವ ಪ್ರಗತಿಯಂತೆ ಕೈಗಾರಿಕೆ ಕ್ಷೇತ್ರದಲ್ಲೂ ಆಗಬೇಕಾಗಿದೆ ಎಂದು ಹೇಳಿದರು.

ಎಸ್‌ಕೆಎಫ್ ಎಲಿಕ್ಸರ್ ಎಂಡ್ ಬಾಯ್ಲರ್ಸ್ ನ ಆಡಳಿತ ನಿರ್ದೇಶಕ ರಾಮಕೃಷ್ಣ ಅಚಾರ್ ಅವರನ್ನು ಸನ್ಮಾನಿಸಲಾಯಿತು.   ಜಯಕೃಷ್ಣ ಪರಿಸರ ಪ್ರೇಮಿ ಸಮಿತಿ ಸದಸ್ಯರಾದ ಡಾ.ಸುರೇಂದ್ರ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.   

ಸಮಿತಿಯ ಅವಳಿ ಜಿಲ್ಲೆಗಳ  ಪ್ರಧಾನ ಕಾರ್ಯದರ್ಶಿ ಅರುಣ್ ಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ  ಮಾತನಾಡಿ ಸಮಿತಿಯನ್ನು ಎರಡು ಜಿಲ್ಲೆಗಳಲ್ಲಿ ಮತ್ತೊಮ್ಮೆ ಸಂಘಟಿಸಿ ಉತ್ತಮ ಕೆಲಸಗಳನ್ನು ಮಾಡಬೇಕಾಗಿದೆ ಎಂದರು. ರಂಜಿತ್ ಕಾರ್ಯಕ್ರಮ  ನಿರೂಪಿಸಿದರು.ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ ವಂದಿಸಿದರು.

Post a Comment

0 Comments