ಅಳಿಯೂರು ಸರಕಾರಿ ಪ್ರೌಢಶಾಲಾ ರಜತ ಮಹೋತ್ಸವ * ರೂ 1 ಕೋಟಿ ವೆಚ್ಚದಲ್ಲಿ ನಾಲ್ಕು ಕೊಠಡಿಗಳ ನಿರ್ಮಾಣ: ಶಾಸಕ ಕೋಟ್ಯಾನ್

ಜಾಹೀರಾತು/Advertisment
ಜಾಹೀರಾತು/Advertisment

 ಅಳಿಯೂರು ಸರಕಾರಿ ಪ್ರೌಢಶಾಲಾ ರಜತ ಮಹೋತ್ಸವ

* ರೂ 1 ಕೋಟಿ ವೆಚ್ಚದಲ್ಲಿ ನಾಲ್ಕು ಕೊಠಡಿಗಳ ನಿರ್ಮಾಣ:  ಶಾಸಕ ಕೋಟ್ಯಾನ್ 



ಮೂಡುಬಿದಿರೆ : ಕಳೆದ ಹಲವು ವರ್ಷಗಳಿಂದ ಅಳಿಯೂರಿಗೆ ಪ.ಪೂ.ಕಾಲೇಜು ಬೇಕೆಂಬ ಬೇಡಿಕೆ ಇತ್ತು.  ಕಳೆದ ಸಾಲಿನಲ್ಲಿ ಅದಕ್ಕೆ ಕಾಲ ಕೂಡಿ ಬಂದಿದ್ದು   ಈ ಸಲ ಮೂರು ಹೊಸ ಕೊಠಡಿಗಳನ್ನು ನಿರ್ಮಿಸಲಾಗಿದೆ, ಒಂದು ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಕೊಠಡಿಗಳನ್ನು ನಿರ್ಮಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು.


ಅಳಿಯೂರು ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ರಜತ ಮಹೋತ್ಸವದಂಗವಾಗಿ ಗುರುವಾರ  ಸಂಜೆ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ನೂತನ ಕೊಠಡಿಗಳನ್ನು ಉದ್ಘಾಟಿಸಿ,'ಬೆಳ್ಳಿ ಬೆಡಗು' ರಜತ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.  ಉತ್ತಮ ಶಿಕ್ಷಕರು, ಸೌಲಭ್ಯಗಳಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತೆರೆಯಲಾದ ಈ ಕಾಲೇಜಿಗೆ  ವಿದ್ಯಾರ್ಥಿಗಳ ಕೊರತೆ ಕಾಡದಂತೆ ಬೆಳೆಸುವಲ್ಲಿ ಊರವರು ಕಾಳಜಿ ವಹಿಸಬೇಕಾಗಿದೆ  ಎಂದರು.


ಜೈನ ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ, ವಾಗ್ಮಿ ಮುನಿರಾಜ ರೆಂಜಾಳ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ  `ಶಿಕ್ಷಣ ಎಂದರೆ ಮಾಹಿತಿ ತುಂಬುವ ಕೆಲಸ ಆಗದೆ ಮಕ್ಕಳು ಯೋಚನೆ, ಸೃಜನಶೀಲತೆ ಬೆಳೆಸಿಕೊಳ್ಳುವ ಮಾರ್ಗದರ್ಶನ ನೀಡುವಂತಾಗಬೇಕು ಎಂದರು. 

ಮುಖ್ಯ ಅತಿಥಿಗಳಾಗಿ ವಾಲ್ಪಾಡಿ ಗ್ರಾ.ಪಂ.ಅಧ್ಯಕ್ಷೆ ವಿಶಾಲಾಕ್ಷಿ,  ಅತಿಥಿಗಳಾಗಿ ಮಜಲೋಡಿಗುತ್ತು  ಪ್ರಮೋದ್ ಆರಿಗಾ, ವಾಲ್ಪಾಡಿ ಗ್ರಾ.ಪಂ. ಸದಸ್ಯರಾದ ಅರುಣ್‌ಕುಮಾರ್ ಶೆಟ್ಟಿ, ಸುಶೀಲ, ಶ್ರೀಧರ ಬಂಗೇರ, ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್,  ಉದ್ಯಮಿಗಳಾದ ರುಕ್ಕಯ್ಯ ಪೂಜಾರಿ, ರಮಾನಾಥ ಸಾಲ್ಯಾನ್, ವಿಶೇಷ ಆಹ್ವಾನಿತಾಗಿ ಇಟಲ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ  ಸುಕೇಶ್ ಶೆಟ್ಟಿ, ಶಿರ್ತಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ  ಪದ್ಮನಾಭ ಕೋಟ್ಯಾನ್, ಕೋಟಿ ಚೆನ್ನಯ ಯುವಶಕ್ತಿ ಸ್ಥಾಪಕ ಅಧ್ಯಕ್ಷ ವಿಶ್ವನಾಥ ಕೋಟ್ಯಾನ್, ಅಳಿಯೂರು ಶಾಲಾ ಹ.ವಿ. ಸಂಘದ ಅಧ್ಯಕ್ಷ ಲಕ್ಷ್ಮಣ್  ಸುವರ್ಣ, ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಬಿ.,  ವಸಂತ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷೆ ಅನಿತಾ ಎಂ. ಆಳ್ವ, ತಾ.ಸರಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್ ಎಸ್., ಜೀವಂಧರ ಇಂದ್ರ, ಪ್ರವೀಣ ಭಟ್, ಮುತ್ತೂರು ಪ.ಪೂ. ಕಾಲೇಜಿನ ಉಪನ್ಯಾಸಕ ನಿರಂಜನ ಪಿ., ಪ್ರವೀಣ ಭಾಗವಹಿಸಿದ್ದರು. ವಿದ್ಯಾರ್ಥಿ ನಾಯಕಿ ಸಮೀಕ್ಷಾ  ಉಪಸ್ಥಿತರಿದ್ದರು.

ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದವರು, ಕ್ರೀಡೆ, ಕಲಿಕೆಯಲ್ಲಿ ಸಾಧಕರಾದ ವಿದ್ಯಾರ್ಥಿಗಳು, ದಾನಿಗಳು, ಸಾಂಸ್ಕೃತಿಕ ಕಲಾಪ ನಿರ್ದೇಶಕರ ಸಹಿತ ಸಹಕಾರಿಗಳನ್ನುಸಮ್ಮಾನಿಸಲಾಯಿತು.

ಪ್ರಾಂಶುಪಾಲ ಚಂದ್ರು ಎಂ.ಎನ್. ಸ್ವಾಗತಿಸಿದರು.

ಮುಖ್ಯಶಿಕ್ಷಕ ಸುಬ್ರಹ್ಮಣ್ಯವಿ. ವರದಿ ಮಂಡಿಸಿ, ತಾಲೂಕಿನಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಗರಿಷ್ಠ  (೩೫೧) ವಿದ್ಯಾರ್ಥಿಗಳಿರುವ ಈ ಪ್ರೌಢಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮಾರ್ಪಡಿಸಬೇಕು, ತೆರೆದ ಬಾವಿ,ಆವರಣಗೋಡೆ, ಅಹಾರ ವಸ್ತು ದಾಸ್ತಾನು ಕೊಠಡಿ ಸಹಿತ ಇನ್ನಷ್ಟು ಕಟ್ಟಡ ನಿರ್ಮಾಣ, ತೆರವಾದ ಹುದ್ದೆಗಳಿಗೆ ನೇಮಕ ಆಗಬೇಕು ಮೊದಲಾದ ಬೇಡಿಕೆಗಳನ್ನು ಮಂಡಿಸಿದರು.

ಶಿಕ್ಷಕಿಯರಾದ ವಿದ್ಯಾ ಸಂದೀಪ ನಾಯಕ ಮತ್ತು ಮಣಿತಾ ಬಿ. ಜೈನ್ ಕಲಾಪ, ಮಹಾದೇವ ಮೂಡುಕೊಣಾಜೆ ಮತ್ತು ವಿದ್ಯಾರ್ಥಿ ರಕ್ಷಿತ್ ಸಾಂಸ್ಕೃತಿಕ ಕಲಾಪ ನಿರೂಪಿಸಿದರು.

Post a Comment

0 Comments