*ಸಾಧನೆಯ ಗದ್ದುಗೆಯಲ್ಲಿ 'ಯುವ'ರಾಜ್ ಡಿ ಕುಂದರ್

ಜಾಹೀರಾತು/Advertisment
ಜಾಹೀರಾತು/Advertisment

 *ಸಾಧನೆಯ ಗದ್ದುಗೆಯಲ್ಲಿ 'ಯುವ'ರಾಜ್ ಡಿ ಕುಂದರ್*



ಕರಾವಳಿಯ ಮಂಗಳೂರು ಮೂಲದ *ಧೀರಜ್ ಕೋಟಿಯನ್  ಹಾಗೂ ವೀಣಾ ಧೀರಜ್ ಇವರ ಪುತ್ರ* ರಾಷ್ಟ್ರ ಮಟ್ಟದ ಕ್ರೀಡಾಪಟು *ಯುವರಾಜ್ ಡಿ ಕುಂದರ್* ತಮ್ಮ ಹನ್ನೊಂದನೇ ವಯಸ್ಸಿನಲ್ಲಿ ರಾಷ್ಟ್ರಮಟ್ಟದ ಸಿ.ಬಿ.ಎ.ಸ್ಸಿ ಸ್ಕೇಟಿಂಗ್ ನಲ್ಲಿ ಎರಡು ಚಿನ್ನದ ಪದಕವನ್ನು ಗೆಲ್ಲುವ ಮೂಲಕ *ರಾಷ್ಟ್ರಮಟ್ಟದಲ್ಲಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದ ಮೊಟ್ಟ ಮೊದಲ ಸಾಧಕರಾಗಿದ್ದಾರೆ.*



*ಇತ್ತೀಚೆಗೆ ಹರಿಯಾಣದಲ್ಲಿ ನವೆಂಬರ್ 23 ರಿಂದ 26ರ ವರೆಗೆ  ನಡೆದ  ರಾಷ್ಟ್ರೀಯ ಮಟ್ಟದಲ್ಲಿ ಸಿ.ಬಿ.ಎಸ್.ಸಿ ಸ್ಕೆಟಿಂಗ್  ಚಾಂಪಿಯನ್ ಶಿಪ್ ನಲ್ಲಿ ಎರಡು ಚಿನ್ನದ ಪದಕವನ್ನು ತಮ್ಮ ಮೂಡಿಗೆರೆಸಿಕೊಳ್ಳುವ* ಮೂಲಕ  ರಾಷ್ಟ್ರಮಟ್ಟದಲ್ಲಿ ಹೆಸರನ್ನು ಮಾಡಿದ್ದಾರೆ.

ಅಷ್ಟೇ ಅಲ್ಲದೆ 2021 22 ನೇ ಸಾಲಿನಲ್ಲಿ  ಆರ್.ಎಸ್. ಎಪ್.ಐ ಇಂಡಿಯಾ ಇವರು ಆಯೋಜಿಸಿದ್ದ *ರಾಷ್ಟ್ರ ಮಟ್ಟದ ಸ್ಕೇಟಿಂಗ್ ಚಾಂಪಿಯನ್ಶಿಪ್ ನಲ್ಲಿ ಗೋಲ್ಡ್ ಮೆಡಲನ್ನು* ತಮ್ಮ ಮುಡುಗೇರಿಸಿಕೊಳ್ಳುವ ಮೂಲಕ ಇಂದಿನ ಯುವ ಜನಾಂಗಕ್ಕೆ ಸಾಧನೆಯ ಸ್ಪೂರ್ತಿಯಾಗಿದ್ದಾರೆ.


*ಮಂಗಳೂರಿನ ರೋಲರ್ ಸ್ಕೇಟಿಂಗ್ ಕ್ಲಬ್* ನಲ್ಲಿ ತರಬೇತಿ ಪಡೆಯುತ್ತಿರುವ ಇವರು ತಮ್ಮ *ತರಬೇತಿದಾರರಾದ ಮಹೇಶ್ ಕುಮಾರ್ ಹಾಗೂ ಶ್ರವಣ್ ಮಹೇಶ್* ಇವರ ಸಂಪೂರ್ಣ ಸಹಕಾರ ಹಾಗೂ ತರಬೇತಿಯ ಪ್ರತಿರೂಪವಾಗಿ ಸಾಧನೆಯ ಉತ್ತುಂಗವನ್ನೇರಿದ್ದಾರೆ. ಇವರು *ಸೈಂಟ್ ಅಲೋಸಿಸ್  ಗೊಂಜಾಗ ಸ್ಕೂಲ್ ನಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.*


 ಇವರ ಸಾಧನೆ ನಿರಂತರವಾಗಿರಲಿ ಹಾಗೂ ಭವಿಷ್ಯ ಉಜ್ವಲವಾಗಿರಲೆಂದು ಆಶಿಸುತ್ತೇವೆ.

Post a Comment

0 Comments