ಎಕ್ಸಲೆಂಟ್ ಸಿಬಿಎಸ್ಇ ಸ್ಕೂಲ್ ನಲ್ಲಿ ಕ್ರೀಡಾಕೂಟ
ಮೂಡುಬಿದಿರೆ: ಕ್ರೀಡೆ ಎಂಬುದು ಸಂಘಟಿತ, ಸ್ವರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದ್ದು ಇದಕ್ಕೆ ಬದ್ಧತೆ ಮತ್ತು ಪರಿಶ್ರಮದ ಅಗತ್ಯವಿರುತ್ತದೆ” ಎಂದು ಮೂಡುಬಿದಿರೆ ತಾಲೂಕಿನ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಹೇಳಿದರು.
ಅವರು ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕ ಕ್ರೀಡಾಕೂಟದ ಉದ್ಘಾಟಿಸಿ ಮಾತನಾಡಿದರು.
ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಕ್ರೀಡೆಯ ಮೂಲಕ ನಡೆಸಲಾಗುವ ಚಟುವಟಿಕೆಗಳು ಪೂರಕವಾಗಲಿ ಎಂದು ಶುಭ ಹಾರೈಸಿದರು.
ಶಾಲಾ ಆಡಳಿತ ನಿರ್ದೇಶಕರಾದ ಡಾ. ಬಿ ಪಿ ಸಂಪತ್ ಕುಮಾರ್, ಶೈಕ್ಷಣಿಕ ನಿರ್ದೇಶಕ ಪುಷ್ಪರಾಜ್ ಬಿ, ಶಾಲಾ ಪ್ರಾಂಶುಪಾಲೆ ದಿವ್ಯಾ ಎಸ್. ನಾಯಕ್ ಹಾಗೂ ಉಪ ಪ್ರಾಂಶುಪಾಲೆ ವಿಮಲ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಜೈನ್ ಈ ಸಂದರ್ಭದಲ್ಲಿದ್ದರು.
ಶಿಕ್ಷಕಿ ನಿಶಾ ಎಸ್ ಪೂಜಾರಿ ಸ್ವಾಗತಿಸಿದರು.ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಅಶ್ವಿತ ವಂದಿಸಿದರು.
0 Comments