ಆಸ್ಟ್ರೇಲಿಯ ಜಯದ ಹಿಂದೆ ತುಳುವ ಹೆಣ್ಣು !
ಮೂಡುಬಿದಿರೆ: ಇತ್ತೀಚೆಗೆ ಮುಗಿದ ವಿಶ್ವಕಫ್ ಟೂರ್ನಿಯಲ್ಲಿ ಆತಿಥೇಯ ಭಾರತವನ್ನು ಸೋಲಿಸಿ 6ನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡ ಆಸ್ಟ್ರೇಲಿಯ ತಂಡದ ಗೆಲುವಿನ ಹಿಂದೆ ತುಳುನಾಡಿನ ಹೆಣ್ಣು ಮಗಳು ಮಹತ್ವದ ಪಾತ್ರ ವಹಿಸಿರುವುದು ನಮಗೆ ಹೆಮ್ಮೆ ಮೂಡಿಸಿದೆ.
ದ.ಕ.ಜಿಲ್ಲೆಯ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಕಿನ್ನಿಗೋಳಿ ಸಮೀಪದ ಐವಿ-ವ್ಯಾಲೆಂಟೈನ್ ರೋಸಾರಿಯೊ ದಂಪತಿಯ ಪುತ್ರಿ ಉರ್ಮಿಳಾ ರೋಸರಿಯೋ ಅವರೇ ಆ ತುಳುವ ಹೆಣ್ಣು ಮಗಳು. ಈಕೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೆತ್ತವರು ಕತಾರ್ ನ ದೋಹಾದಲ್ಲಿ ಕೆಲಸ ಮಾಡುತ್ತಿದ್ದಾಗ ಜನಿಸಿದ್ದರು. ಕಳೆದ ಏಳು ವರ್ಷಗಳ ಹಿಂದೆ ಭಾರತಕ್ಕೆ ಮರಳಿದ ಪಾಲಕರು ಸಕಲೇಶಪುರದಲ್ಲಿ ಕಾಫಿ ತೋಟ ನಡೆಸುತ್ತಿದ್ದಾರೆ. ಕಾರ್ನೆಜಿ ಮೆಲನ್ ವಿವಿಯಿಂದ ಬಿಬಿಎ ಪದವೀಧರರಾಗಿರುವ ಉರ್ಮಿಳಾ ಚಿಕ್ಕಂದಿನಲ್ಲಿಯೇ ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರು. ಈ ಹಿಂದೆ ಕತಾರ್ ಫೆಡರೇಶನ್ ನಲ್ಲಿ 3 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದರು. ಬಳಿಕ ಆಸ್ಟ್ರೇಲಿಯಾದ ಅಡಿಲೇಡ್ ಕ್ರಿಕೆಟ್ ತಂಡದೊಂದಿಗೆ ಸುಮಾರು 3 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದರು. ಬಳಿಕ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ ಆಯ್ಕೆಗೊಂಡರು.
ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಆಸ್ಟ್ರೇಲಿಯ ಪುರುಷ ಕ್ರಿಕೆಟ್ ತಂಡದ ಹೊಣೆ ಹೊತ್ತಿದ್ದಾರೆ.
ಈ ಬಾರಿಯ ವಿಶ್ವಕಫ್ ನಲ್ಲಿ ಭಾರತವನ್ನು ಆಸ್ಟ್ರೇಲಿಯ ಮಣಿಸಿರುವ ಬಗ್ಗೆ ಬೇಸರವಿದ್ದರೂ ಆಸ್ಟ್ರೇಲಿಯಾ ವಿಶ್ವಕಫ್ ಗೆಲ್ಲಲು ತಂಡದ ಮ್ಯಾನೇಜರ್ ಆಗಿ ಓರ್ವ ತುಳುವ ಹೆಣ್ಣು ಮಗಳ ಮಹತ್ತರವಾದ ಪಾತ್ರವಿತ್ತು ಎಂಬ ಬಗ್ಗೆ ಕರಾವಳಿಗೆ ಹೆಮ್ಮೆಯ ಸಂಗತಿ.
0 Comments