ಮೂಡುಬಿದಿರೆ: ಇರುವೈಲು ಗ್ರಾ.ಪಂ. ವ್ಯಾಪ್ತಿಯ ಹೊಸಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ಗ್ರಾಹಕ ಮಾಹಿತಿ ಕಾರ್ಯಕ್ರಮ ನಡೆಯಿತು.
ರಾಜ್ಯ ಗ್ರಾಹಕ ಕ್ರಿಯೇಟ್ ಸಂಸ್ಥೆಯ ಸದಸ್ಯ, ದ.ಕ. ಜಿಲ್ಲಾ ಗ್ರಾಹಕ ಸಂಘಟನೆ
ಒಕ್ಕೂಟದ ಜತೆ ಕಾರ್ಯದರ್ಶಿ, ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ
ಅವರು ಮಾಹಿತಿ ನೀಡಿ
ಗ್ರಾಹಕ ಬಳಕೆದಾರರ ಹಕ್ಕು ಗಳು, ಗ್ರಾಹಕರ ಜವಾಬ್ದಾರಿಗಳು, ಲೋ ಪ ದೋಷ ಪರಿಹಾರದ ಮಾರ್ಗೊಪಾಯಗಳು,
ದೈನಂದಿನ ಕಾರ್ಯಗಳಲ್ಲಿ ಅಗತ್ಯವಾಗಿ ತಿಳಿದಿರಬೇಕಾದ ಹಲವಾರು ಮಾಹಿತಿಗಳನ್ನು ನೀಡಿದ ಅವರು ದೂರು ನೀ ಡುವ ಮೊದಲು
ದಾಖಲೀ ಕರಣದ ಕ್ರಮದ ವಿಧಾನಗಳನ್ನು, ಅಂಗಡಿಯ ವಸ್ತು
ಮತ್ತು ಇಲಾಖೆಗಳ ಗ್ರಾಹಕ ಹಿತ ರಕ್ಷಣಾ ಕಾಯಿದೆ,
ಮಾಹಿತಿ ಹಕ್ಕು ಕಾಯ್ದೆ ಇತ್ಯಾ ದಿಗಳ ಮಾಹಿತಿ ನೀಡಿದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶಾಲಿನಿ ಕುಮಾರಿ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕ ಸೂರ್ಯನ್
ರಾವ್, ದೇವನಾಥ, ಜಯಂತಿ, ವಿನೋದ ಎಂ, ಸುರಕ್ಷಾ ಹಾಜರಿದ್ದರು.
ಗ್ರಾಹಕ ಕ್ಲಬ್ ನ ಸಂಯೋ ಜಕ
ಶಿಕ್ಷಕಿ ನಳಿನಿ ಕಾಮತ್ ಸ್ವಾ ಗತಿಸಿ, ವಂದಿಸಿದರು.
0 Comments