ವಾಯ್ಸ್ ಅಪ್ ಆರಾಧನ ತಂಡದಿಂದ ಶಾಲೆಗೆ ಪ್ರಿಂಟರ್ ಕೊಡುಗೆ
ಮೂಡುಬಿದಿರೆ : ವಾಯ್ಸ್ ಆಪ್ ಆರಾಧನ ತಂಡದ ಮೊದಲ ಯೋಜನೆಯಾಗಿ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೆಂಚಾರು ಶಾಲೆ ಇಲ್ಲಿಗೆ ಮಂಗಳವಾರ ಪ್ರಿಂಟರನ್ನು ನೀಡಲಾಯಿತು. ಪದ್ಮಶ್ರೀ ಭಟ್ ನಿಡ್ಡೋಡಿ ಸ್ನೇಹಲತ ಶ್ರೀಕಾಂತ ಭಟ್, ಅಭಿಷೇಕ್ ಶೆಟ್ಟಿ ಐಕಳ ಶಾಲಾ ಯೋಜನೆಗೆ ಸಹಕರಿಸಿದರು. ತಂಡದ ಸದಸ್ಯರಾದ ಬಹುಮುಖ ಪ್ರತಿಭೆಯರಾದ ಮನ್ಯು ಸಹೋದರರು, ಶ್ರೇಯಾ ಸುಳ್ಯ, ಬಾಲಪ್ರತಿಭೆ ಕನಸು ಬೆಂಗಳೂರು, ಮೋನಿಷ್ ವಿಟ್ಲ , ಮಾಹಿವಿಟ್ಲ, ಮಾನ್ಯ ಭಟ್ ಕಡಂದಲೆ ,ಗಾಯಕ ಅಶ್ಮಿತ್ ಎ.ಜೆ ಮಂಗಳೂರು, ಉದ್ಯಮಿ ಅರುಣ್ ಅಜೆಕಾರು, ಬಸವರಾಜ ಮಂತ್ರಿ, ಸುಭೀಕ್ಷ ಪ್ರತೀಕ್ಷ, ಕ್ರಷಿಕರಾದ ಡಾ. ನಾಗರಾಜ ಶೆಟ್ಟಿ ಅಂಬೂರಿ , ಬಾಲಪ್ರತಿಭೆ ಶಾರ್ವಿ ಕಟ್ಟಾವು, ಮಜಾಭಾರತ ಖ್ಯಾತಿಯ ಆರಾಧನ ಭಟ್ ಈ ಸಂದರ್ಭದಲ್ಲಿದ್ದರು.
ತಂಡವು ಪ್ರತಿ ತಿಂಗಳು ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುತ್ತ ಬಂದಿದ್ದು ಇದರ ಜತೆಗೆ ಸರಕಾರಿ ಶಾಲಾ ಯೋಜನೆಯನ್ನು ಹಮ್ಮಿ ಕೊಂಡಿದೆ. ಆರೋಗ್ಯದ ಜೊತೆ ಶಾಲೆಗೂ ಸೇವಾ ಯೋಜನೆ ನೀಡಲು ಆರಂಭಿಸಿದೆ.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀವಾಣಿ ಮಯ್ಯ, ಶಿಕ್ಷಕಿ ಅರ್ಚನ ಗೌರವ ಶಿಕ್ಷಕಿ, ಗೀತ, ಪೋಷಕರಾದ, ಜಯಕರ ಶೆಟ್ಟಿ, ಪ್ರಶಾಂತ ಉಪಸ್ಥಿತರಿದ್ದರು.
0 Comments