ಮೂಡುಬಿದಿರೆ : ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಪದಗ್ರಹಣ
ಮೂಡುಬಿದಿರೆ: ಆಟೋ ರಿಕ್ಷಾ ಚಾಲಕ ಹಾಗೂ ಮಾಲಕರ ಸಂಘ ತಾಲೂಕು 2023-2024 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸಂಘದ ಕಚೇರಿಯಲ್ಲಿ ಜರಗಿತು.
ಸಂಘದ ಮಾಜಿ ಅಧ್ಯಕ್ಷ ಸಂತೋಷ್ ಆರ್ ಶೆಟ್ಟಿ ಮಾರ್ನಾಡ್ ಅವರು ಹಾಲಿ ಅಧ್ಯಕ್ಷ ಧರಣೇಂದ್ರ ಜೈನ್, ಕಾರ್ಯದರ್ಶಿ ದೀಪಕ್ ರಾಜ್ ಹಾಗೂ ಪದಾಧಿಕಾರಿಗಳಿಗೆ ಸಂಘದ ಕೀ ಹಾಗೂ ಲೆಕ್ಕ ಪುಸ್ತಕಗಳನ್ನು ಹಸ್ತಾಂತಿಸಿದರು. ಸಂಘದ ಮಾಜಿ ಅಧ್ಯಕ್ಷರುಗಳಾದ ಪ್ರಶಾಂತ್ ಅಂಚನ್ (ಅಣ್ಣು ), ರಾಜೇಶ್ ಸುವರ್ಣ, ಜಯರಾಮ್ ರಾವ್, ಸುರೇಶ್ ಕೋಟ್ಯಾನ್, ಆನಂದ್ ಪೂಜಾರಿ ಮತ್ತು ಸಂಘ ದ ಮಾಜಿ ಹಾಗೂ ಹಾಲಿ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ರಾಜೇಶ್ ಸುವರ್ಣ ಹೌದಲ್ ಕಾರ್ಯಕ್ರಮ ನಿರೂಪಿಸಿದರು.
0 Comments