ಜಿಲ್ಲೆಯಲ್ಲಿ ಉಚಿತ ಕಟೀಲ್ ಸಂಚಾರಿ ಬೇಬಿ ಕ್ಲಿನಿಕ್ ಸೇವೆ -ಡಾ.ಸುಧಾಕರ ಶೆಟ್ಟಿ

ಜಾಹೀರಾತು/Advertisment
ಜಾಹೀರಾತು/Advertisment

 ಜಿಲ್ಲೆಯಲ್ಲಿ ಉಚಿತ ಕಟೀಲ್ ಸಂಚಾರಿ ಬೇಬಿ ಕ್ಲಿನಿಕ್ ಸೇವೆ -ಡಾ.ಸುಧಾಕರ ಶೆಟ್ಟಿ 


ಮೂಡುಬಿದಿರೆ: ಬಂಟರ ಮಹಿಳಾ ಘಟಕ ಮೂಡುಬಿದಿರೆ ಮತ್ತು ನಡ್ಯೋಡಿ ಮಹಿಳಾ ಮಂಡಲ ಮಾರ್ಪಾಡಿ-ಕಲ್ಲಬೆಟ್ಟು ಇದರ ವತಿಯಿಂದ ಆಳ್ವಾಸ್ ಹೆಲ್ತ್ ಸೆಂಟರ್ ಸಹಕಾರದೊಂದಿಗೆ ಡಾ.ಸುಧಾಕರ ಶೆಟ್ಟಿ ನೇತ್ರತ್ವದಲ್ಲಿ ಸೋಮವಾರ ನಡ್ಯೋಡಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ನಡೆಯಿತು.


ದ.ಕ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ತಜ್ಞ ಡಾ.ಸುಧಾಕರ ಶೆಟ್ಟಿ ಪುಣೆ ಕಾರ್ಯಕ್ರಮವನ್ನುದ್ದೇಶಿಸಿ‌ ಮಾತನಾಡಿ ದ.ಕ ಮತ್ತು ಉಡುಪಿ ಜಿಲ್ಲೆಯ ಆಯ್ದ ಐವತ್ತು ಗ್ರಾಮಗಳಲ್ಲಿ ಶೀಘ್ರದಲ್ಲೆ ಉಚಿತ `ಕಟೀಲ್ ಸಂಚಾರಿ ಬೇಬಿ ಕ್ಲಿನಿಕ್ ಸೇವೆ'  ಪ್ರಾರಂಭಿಸಲಾಗುವುದು ಎಂದು  ಹೇಳಿದರು.

 ಮಕ್ಕಳಲ್ಲಿ ಕಂಡುಬರುವ ಅಪೌಷ್ಟಿಕತೆಯು  ಅವರ ಬೆಳವಣಿಗೆ ಕುಂಠಿತ ಮತ್ತು ರೋಗಗಳಿಗೆ ಕಾರಣವಾಗುತ್ತದೆ. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಲು ಮಿಜಾರು, ಕಟೀಲು, ಮುಲ್ಕಿ, ಎಕ್ಕಾರು, ಮಾರ್ಪಾಡಿ, ಪಡುಬಿದ್ರೆ ಸಹಿತ ಅವಳಿ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಈಗಾಗಲೇ ಸರ್ವೆ ಕಾರ್ಯಕ್ರಮ ನಡೆಯುತ್ತಿದೆ. ಡಿಸೆಂಬರ್‌ನಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಿ ನಂತರ  ಉಚಿತ  `ಕಟೀಲ್ ಸಂಚಾರಿ ಬೇಬಿ ಕ್ಲಿನಿಕ್ ಸೇವೆ' ಆರಂಭಿಸಲಾಗುವುದು ಎಂದು ಹೇಳಿದರು. 

ನಡ್ಯೋಡಿ ಶಾಲೆಯಲ್ಲಿ ಒಟ್ಟು ೨೮ ಮಕ್ಕಳ ತಪಾಸಣೆ ನಡೆಸಲಾಯಿತು. ಮೂಡುಬಿದಿರೆ ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಹೆಗ್ಡೆ, ಕಾರ‍್ಯದರ್ಶಿ ಸೌಮ್ಯ ಎಸ್. ಶೆಟ್ಟಿ ಹಾಗೂ ಸದಸ್ಯರು ನಡ್ಯೋಡಿ ಮಹಿಳಾ ಮಂಡಲ ಅಧ್ಯಕ್ಷೆ  ಗೀತಾ ಪಿ. ಶೆಟ್ಟಿ, ಕಾರ್ಯದರ್ಶಿ ಹೇಮಾವತಿ ಆರ್. ಪೂಜಾರಿ ಮತ್ತಿತರ ಸದಸ್ಯರು ಭಾಗವಹಿಸಿದರು.

Post a Comment

0 Comments