ಮೂಡುಬಿದಿರೆ ಬಸದಿಗಳಲ್ಲಿ ಜೀವದಯಾಷ್ಟಮಿ ಆಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಬಸದಿಗಳಲ್ಲಿ ಜೀವದಯಾಷ್ಟಮಿ ಆಚರಣೆ


ಮೂಡುಬಿದಿರೆ: ಇಲ್ಲಿನ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಮೂಡುಬಿದಿರೆಯ ಬಸದಿಗಳಲ್ಲಿ ಜೀವದಯಾಷ್ಟಮಿ ಪ್ರಯುಕ್ತ ಭಾನುವಾರ ವಿಶೇಷ ಪೂಜೆ ನಡೆಯಿತು. 

ಭಟ್ಟಾರಕ ಸ್ವಾಮೀಜಿ ಹಾಗೂ ಶ್ರಾವಕರು 18 ಬಸದಿ ದರ್ಶನ ಮಾಡಿದರು. ಶುಭ ಚಿಂತನೆಯ ಪೂಜೆ, ಆರಾಧನೆ, ಭಕ್ತಿ ಶುದ್ಧ ಆತ್ಮನಾಗಿ ಪರಮ ಪದವಿ ಪ್ರಾಪ್ತಿ ಮಾಡಿಕೊಳ್ಳಲು ಭಕ್ತರಿಗೆ ಸಮ್ಯಕ್ ರತ್ನತ್ರಯ ಸಹಕಾರಿ ಎಂದು ಭಟ್ಟಾರಕ ಸ್ವಾಮೀಜಿ ನುಡಿದರು. 


ಪಾಠಶಾಲೆಯಲ್ಲಿ ಪಡಂಗಡಿ ಜಿನೇಂದ್ರ ಅವರ ಜಿನವಾಣಿ ತಂಡದಿAದ ಪಂಚಪರಮೆಷ್ಟಿ ಆರಾಧನೆ,ಪಂಚಾಮೃತ ಅಭಿಷೇಕ ನಡೆಯಿತು. ಬೆಟ್ಕೇರಿ ಮನೆತನದಿಂದ ಧವಳತ್ರಯ ಜೈನ ಕಾಶಿ ಟ್ರಸ್ಟ್ ಪ್ರಕಾಶನ ಮಾಡಿದ ಬಸದಿಗಳ ಮೊಕ್ತೇಸರ ದಿನೇಶ್ ಆನಡ್ಕ ದಾನ ಮಾಡಿದ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಸಿದ್ದ ಕೂಟದಲ್ಲಿ ಸರ್ವ ಪೂಜೆ, ಗುರುಗಳ ಬಸದಿಯಲ್ಲಿ ಕ್ಷೀರ ಅಭಿಷೇಕ, ಪೂಜೆ ಮಹಾ ಮಂಗಳಾರತಿ ನೆರವೇರಿತು.


ಬಸದಿಗಳ ಮೊಕ್ತೇಸರ ಪಟ್ಣಶೆಟ್ಟಿ ಸುದೇಶ್ ಕುಮಾರ್, ಆದರ್ಶ್ ಎಂ., ವಕೀಲ ಬಾಹುಬಲಿ ಪ್ರಸಾದ್, ವೈಶಾಲಿ ಬಲ್ಲಾಳ್, ನಾಥ್ ಬಲ್ಲಾಳ್, ಜೀವಂಧರ ಜೈನ್ ಪುತ್ತೂರು, ಪದ್ಮಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments