ಬನ್ನಡ್ಕದಲ್ಲಿ ಎರಡನೇ ವರ್ಷದ ಶಾರದೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

ಬನ್ನಡ್ಕದಲ್ಲಿ ಎರಡನೇ ವರ್ಷದ ಶಾರದೋತ್ಸವ

ಮೂಡುಬಿದಿರೆ: ಇಲ್ಲಿನ ಬನ್ನಡ್ಕ ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ಆಶ್ರಯದಲ್ಲಿ 2ನೇ ವರ್ಷದ ಶಾರದೋತ್ಸವ ಮಂಗಳವಾರ ಶ್ರೀಕ್ಷೇತ್ರ ಬನ್ನಡ್ಕದ ಕಲಾಮಂದಿರದಲ್ಲಿ ನಡೆಯಿತು. 



ಒಂಟಿಕಟ್ಟೆಯಿಂದ ಮೂಡುಬಿದಿರೆ ನಗರವಾಗಿ ಬನ್ನಡ್ಕಕ್ಕೆ ಶಾರದೆಯ ವಿಗ್ರಹ ಮೆರವಣಿಗೆ ನಡೆಯಿತು. 

ಶಾರದೆಯ ವಿಗ್ರಹವನ್ನು ಟ್ರಸ್ಟ್ನ ಅಧ್ಯಕ್ಷ ಎಂ.ದಯಾನAದ ಪೈ ಪ್ರತಿಷ್ಠಾಪಿಸಿದರು. ಶಾಸಕ ಉಮಾನಾಥ ಕೋಟ್ಯಾನ್ ದೀಪ ಪ್ರಜ್ವಲನೆ ಮಾಡಿದರು. ಬಳಿಕ ಭಜನಾ ಸಂಕೀರ್ತನೆ, ಶ್ರೀದುರ್ಗಾಹೋಮ, ಮಹಾಪೂಜೆ ನಡೆಯಿತು. ದೇವರಿಗೆ ಬೆಳ್ಳಿಯ ಕಿರೀಟ, ನೂತನ ಪೀಠ ಹಾಗೂ ನೂತನ ಪ್ರಭಾವಳಿಯನ್ನು ಈ ಸಂದರ್ಭದಲ್ಲಿ ಸಮರ್ಪಿಸಲಾಯಿತು. ಸಾಯಂಕಾಲ ಬನ್ನಡ್ಕದಿಂದ  ಅಲಂಗಾರುವರೆಗೆ ವೈಭವದ ಶೋಭಾಯಾತ್ರೆ ನಡೆದು ಮಾನಸ ಕೆರೆಯಲ್ಲಿ ಶಾರದೆಯ ವಿಗ್ರಹವನ್ನು ವಿಸರ್ಜಿಲಾಯಿತು. 

ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದರು.

Post a Comment

0 Comments