ಸರ್ವೋದಯ ಫ್ರೆಂಡ್ಸ್ ನಿಂದ ಪುರಸಭಾ ಪೌರಕಾರ್ಮಿಕರಿಗೆ ಗೌರವಾರ್ಪಣೆ

ಜಾಹೀರಾತು/Advertisment
ಜಾಹೀರಾತು/Advertisment

 ಸರ್ವೋದಯ ಫ್ರೆಂಡ್ಸ್ ನಿಂದ  ಪುರಸಭಾ ಪೌರಕಾರ್ಮಿಕರಿಗೆ  ಗೌರವಾರ್ಪಣೆ



ಮೂಡುಬಿದಿರೆ: ಇಲ್ಲಿನ‌ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 60ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ  ಮೆರವಣಿಗೆಯ ಸಂದರ್ಭದಲ್ಲಿ ಬಿದ್ದಿರುವ ಕಸ-ತ್ಯಾಜ್ಯಗಳನ್ನು  ಬೆಳಕು ಮೂಡುವ ಮೊದಲೆ   ನಗರವನ್ನು ಸಂಪೂರ್ಣ ಸ್ವಚ್ಛಗೊಳಿಸಿ  ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿರುವ ಮೂಡುಬಿದಿರೆ  ಪುರಸಭೆಯ ಪೌರಕಾರ್ಮಿಕರನ್ನು ಸರ್ವೋದಯ ಫ್ರೆಂಡ್ಸ್ ಕ್ಲಬ್ ರಿಜಿಸ್ಟರ್ಡ್ ಮೂಡುಬಿದಿರೆಯು ಮಂಗಳವಾರ  ಸನ್ಮಾನಿಸಿದೆ.

 


ಸರ್ವೋದಯ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಗುರುದೇವಾಡಿಗ, ಪುರಸಭಾ ಮುಖ್ಯಾಧಿಕಾರಿ ಇಂದು ಎಂ,  ಪರಿಸರ ಅಭಿಯಂತರೆ ಶಿಲ್ಪ, ಸ್ಥಾಯಿ ಸಮಿತಿಯ ನಿರ್ಗಮನ ಅಧ್ಯಕ್ಷ ನಾಗರಾಜ್ ಪೂಜಾರಿ ಪುರಸಭಾ ಸದಸ್ಯರಾದ ಸುರೇಶ್ ಪ್ರಭು, ಸರ್ವೋದಯ ಫ್ರೆಂಡ್ಸ್ ನ ಭವಿಷ್ಯತ್ ಕೋಟ್ಯಾನ್,   ದಿವ್ಯವರ್ಮ ಬಲ್ಲಾಳ್,  ವಿಜೇತ್ ಆಚಾರ್ಯ ಮನು, ಸಂತೋಷ್, ರಂಜಿತ್ ರೈ ಹಾಗೂ ಪುರಸಭಾ ಸಿಬ್ಬಂದಿಗಳು ಈ ಸಂದರ್ಭದಲ್ಲಿದ್ದರು.

Post a Comment

0 Comments