ಕೃಷಿ ನಾಶಗೊಳಿಸಿ ವಿಕೃತಿ ಮೆರೆದ ಅರಣ್ಯ ಇಲಾಖೆ:ಕೋಟ ಭೇಟಿ
ಹೊನ್ನಾವರ ತಾಲೂ
ಕಿನ ಚಿಕ್ಕನಕೋಡ ಗ್ರಾಮದ ಹೊಸಗೋಡ ಸಮೀಪ ಜಿ.ಪಿ.ಎಸ್ ಆದ ಅತಿಕ್ರಮಣ ಪ್ರದೇಶದಲ್ಲಿ ವಾಸವಿರುವ ಕುಟುಂಬದವರು ಬೆಳೆಸಿದ ಅಡಿಕೆ, ಬಾಳೆಗಿಡಗಳನ್ನು ಅರಣ್ಯಾಧಿಕಾರಿಗಳು ಕಡಿಯುವ ಮೂಲಕ ಹಾನಿ ಮಾಡಿರುವ ಪ್ರದೇಶಕ್ಕೆ ವಿಧಾನಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಭೇಟಿ ನೀಡಿ ಅರಣ್ಯ ಅಧಿಕಾರಿಗಳು ಹಾನಿ ಮಾಡಿದ ಸ್ಥಳ ಪರಿಶೀಲನೆ ನಡೆಸಿ ಕುಟುಂಬದವರೊಂದಿಗೆ ಚರ್ಚೆ ನಡೆಸಿದರು.
ಜಿಲ್ಲೆಯಲ್ಲಿ 60 ಸಾವಿರದಷ್ಟು ಅತಿಕ್ರಮಣದಾರರಿದ್ದು, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾರಿಗೂ ತೊಂದರೆ ನೀಡಿಲ್ಲ. ಮುಂದಿನ ದಿನದಲ್ಲಿ ಅತಿಕ್ರಮಣದಾರಿಗೆ ತೊಂದರೆಯಾದಲ್ಲಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆಯನ್ನು ಮಾಧ್ಯಮದ ಮುಖೇನ ಸರ್ಕಾರಕ್ಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ್ ಮತ್ತು ಬಿಜೆಪಿ ಹೊನ್ನಾವರ ಮಂಡಲದ ವಿವಿಧ ಪದಾಧಿಕಾರಿಗಳು, ಸ್ಥಳೀಯ ಪಂಚಾಯತ್ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
0 Comments