"ದೇಹ -ಮನಸ್ಸುಗಳ ಸಾಮರಸ್ಯ" ಆರೋಗ್ಯ ಅರಿವು
ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ಆಂತರಿಕ ಸಮಿತಿ ವತಿಯಿಂದ ‘ದೇಹ -ಮನಸ್ಸುಗಳ ಸಾಮರಸ್ಯ’ ಆರೋಗ್ಯ ಅರಿವು ಕಾರ್ಯಕ್ರಮ ಕಾಲೇಜಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಿತು.
ಸ್ತ್ರೀರೋಗ ಮತ್ತು ಹೆರಿಗೆ ತಜ್ಞೆ ಡಾ. ರಶ್ಮಿಮುರಳಿ ಕೃಷ್ಣ ಮಾತನಾಡಿ, ಯೌವ್ವನದ ದೈಹಿಕ ಬದಲಾವಣೆಗಳಿಂದ ಹೆಣ್ಣು ಮಕ್ಕಳು ಸಂಕೋಚಕ್ಕೆ ಒಳಗಾಗುತ್ತಾರೆ. ಬದಲಾವಣೆ ಸಹಜ. ಸಂಕೋಚ ಬೇಡ ಎಂದರು.
ಸಂಸ್ಕರಿಸಿದ ಆಹಾರಗಳ ಸೇವನೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಋತುಚಕ್ರ ಏರುಪೇರಿಗೆ ಕಾರಣವಾಗುತ್ತದೆ. ಪೌಷ್ಟಿಕ ಆಹಾರ ಸೇವನೆ ಮತ್ತು ಹೆಚ್ಚು ನೀರು ಕುಡಿಯುವುದು ದೇಹದ ಆರೋಗ್ಯವನ್ನು ಸುಧಾರಿಸುತ್ತದೆ ಎಂದರು.
ಹಲವು ಜವಾಬ್ದಾರಿಗಳನ್ನು ನಿಭಾಯಿಸುವ ಹೆಣ್ಣು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯ. ಉತ್ತಮ ಅಭ್ಯಾಸಗಳು ಮಾನಸಿಕ ಒತ್ತಡಗಳನ್ನು ನಿರ್ವಹಿಸಲು ಸಹಕರಿಸುತ್ತದೆ ಎಂದರು.
ಪೋಷಕರ ಹಾಗೂ ಶಿಕ್ಷಕರ ಸಹಾಯದ ಮೂಲಕ ಯೌವ್ವನದ ಜವಾಬ್ದಾರಿಗಳನ್ನು ನಿಭಾಯಿಸಬೇಕು. ದೌರ್ಜನ್ಯ ಮತ್ತು ದುರ್ಬಳಕೆ ವಿರುದ್ಧ ಸ್ವಯಂ ರಕ್ಷಣೆಯ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.
ಪದವಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಜಾನ್ಸಿ ಪಿ.ಎನ್. ಮಾತನಾಡಿ, ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನ ಗೊಂದಲಗಳನ್ನು ನಿವಾರಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಕಾಲೇಜಿನ ವಿಜ್ಞಾನ ವಿಭಾಗದ ಸಂಯೋಜಕಿ ಜ್ಯೋತಿ ಎ.ಎಂ. ಉಪಸ್ಥಿತರಿದ್ದರು.
ಆಂತರಿಕ ಸಮಿತಿಯ ಸಂಚಾಲಕಿ ಡಾ. ಸುಲತಾ ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ವಿದ್ಯಾ ಪ್ರಸಾದ್ ನಿರೂಪಿಸಿದರು. ಉಪನ್ಯಾಸಕಿ ಆಶಾ ಈ. ವಂದಿಸಿದರು.
0 Comments