ಮೂಡುಬಿದಿರೆಯಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ



 ಮೂಡುಬಿದಿರೆ: ಇಲ್ಲಿನ ಪವರ್ ಫ್ರೆಂಡ್ಸ್ ಬೆದ್ರ  ಮತ್ತು ಕುಮಾರ್ ಎಲೆಕ್ಟ್ರಿಕಲ್ಸ್ ಇವುಗಳ ಸಹಭಾಗಿತ್ವದಲ್ಲಿ

ಭಾರತೀಯ ಅಂಚೆ ಇಲಾಖೆ  ಪುತ್ತೂರು ವಿಭಾಗದ ವತಿಯಿಂದ ಅಂಚೆ ಜನಸಂಪರ್ಕ ಅಭಿಯಾನ ಮಂಗಳವಾರ ನಾಗರಕಟ್ಟೆಯಲ್ಲಿ ನಡೆಯಿತು.



ವಿದ್ಯುತ್ ಗುತ್ತಿಗದಾರ ನವೀನ್ ಕರ್ಕೇರಾ ಅವರು ಉದ್ಘಾಟಿಸಿ ಮಾತನಾಡಿ   ಉತ್ತಮ ಯೋಜನೆಗಳು ಇನ್ನಷ್ಟು ನೆರವೇರಲಿ ಇದಕ್ಕೆ ಎಲ್ಲರೂ ಕೈ ಜೋಡಿಸೋಣ ಎಂದು ಶುಭ ಹಾರೈಸಿದರು. 

ಪವರ್ ಫ್ರೆಂಡ್ಸ್ ನ ಅಧ್ಯಕ್ಷ

 ವಿನಯ್ ಕುಮಾರ್ ಮಾತನಾಡಿ

 ಸಮಾಜಮುಖಿ ಕೆಲಸಗಳು ನಿರಂತವಾಗಿ ನಡೆಯಲಿ ಇದಕ್ಕೆ ಸಂಪೂರ್ಣವಾದ ಸಹಕಾರ  ಪವರ್ ಫ್ರೆಂಡ್ಸ್ ಬೆದ್ರ ನೀಡುತ್ತದೆ ಎಂದರು.

ಭಾರತೀಯ ಅಂಚೆ ಇಲಾಖೆಯ ಗುರುಪ್ರಸಾದ್ ಕೆ.ಎಸ್ ಅಂಚೆ ಸೇವಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.


ಎಲೆಕ್ಟ್ರಿಕಲ್ ಸಂಸ್ಥೆಯ ಎಲ್ಲಾ ಉದ್ಯೋಗಿಗಳಿಗೆ ಮತ್ತು ಪವರ್ ಫ್ರೆಂಡ್ಸ್ ನ ಸದಸ್ಯರಿಗೆ ಸಮೂಹ ಅಪಘಾತ ವಿಮೆಯನ್ನು  ಮಾಡಿಸಲಾಯಿತು.


ಎಲೆಕ್ಟ್ರಿಕಲ್ ಸಂಸ್ಥೆಯ ಅಧ್ಯಕ್ಷ ಕುಮಾರ್ ಪೂಜಾರಿ ಉಪಸ್ಥಿತರಿದ್ದರು.

ಪವರ್ ಫ್ರೆಂಡ್ಸ್ ನ ಉಪಾಧ್ಯಕ್ಷ, ವಕೀಲ  ಜಯಪ್ರಕಾಶ್ ಭಂಡಾರಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.


ಈ ಸಂದರ್ಭದಲ್ಲಿ ಎಲೆಕ್ಟ್ರಿಕಲ್ಸ್ ನ ಉದ್ಯೋಗಿಗಳು ಮತ್ತು ಪವರ್ ಫ್ರೆಂಡ್ಸ್ ನ ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments