ಗಾಂಧಿ ಜಯಂತಿ ಆಚರಣೆ ಮತ್ತು ಸಂವಾದ ಗಾಂಧಿ ಚಿಂತನೆಗಳು ಇಂದಿಗೂ ಪ್ರಸ್ತುತ : ಅರವಿಂದ ಚೊಕ್ಕಾಡಿ

ಜಾಹೀರಾತು/Advertisment
ಜಾಹೀರಾತು/Advertisment

 ಗಾಂಧಿ ಜಯಂತಿ ಆಚರಣೆ ಮತ್ತು ಸಂವಾದ

ಗಾಂಧಿ ಚಿಂತನೆಗಳು ಇಂದಿಗೂ ಪ್ರಸ್ತುತ : ಅರವಿಂದ ಚೊಕ್ಕಾಡಿ


ಮೂಡುಬಿದಿರೆ: ರಾಷ್ಟ್ರೀಯತೆ ರೂಪಿಸಿದವರು ಅರವಿಂದ ಚೊಕ್ಕಾಡಿ ಗಾಂಧೀಜಿ. ಒಂದಕ್ಕೊಂದು ಸಂಪರ್ಕ ಕಲ್ಪಿಸಿ ಇಡೀ ರಾಷ್ಟ್ರವನ್ನು ಒಂದು ವಿಚಾರಕ್ಕೆ ಒಗ್ಗೂಡಿಸಿ ಭಾವೈಕ್ಯತೆ ಮೂಡಿಸಿದ, ಏಕಾತ್ಮತೆಯಲ್ಲಿ ಪೋಣಿಸುವ ಶಕ್ತಿಯನ್ನು ಮಾಡಿರುವ ಗಾಂಧೀಜಿ ಅವರ ಚಿಂತನೆ ಇಂದಿಗೂ ಪ್ರಸ್ತುತ ಎಂದು  ಖ್ಯಾತ ಚಿಂತಕ, ಗಾಂಧಿ ವಿಚಾರ ವೇದಿಕೆಯ ಮಾತೃ ಸಮಿತಿ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ಹೇಳಿದರು.


ಗಾಂಧಿ ವಿಚಾರ ವೇದಿಕೆ ಮೂಡುಬಿದಿರೆ ಶಾಖೆಯ ಆಶ್ರಯದಲ್ಲಿ ಸಮಾಜ ಮಂದಿರ ಸಭಾದಲ್ಲಿ ನಡೆದ ಗಾಂಧಿ ಜಯಂತಿ ಆಚರಣೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ `ಗಾಂಧಿ ಚಿಂತನೆಗಳು ಮತ್ತು ವರ್ತಮಾನದ ಭಾರತ’ ವಿಚಾರದಲ್ಲಿ ಉಪನ್ಯಾಸ ನೀಡಿದರು.

ದೇಶದಾದ್ಯಂತ ಸ್ವತಂತ್ರ ಅಸ್ತಿತ್ವಗಳಿದ್ದವು. ಅದನ್ನು ಒಗ್ಗೂಡಿಸುವ ಕಾರ್ಯ ಮಹಾತ್ಮ ಗಾಂಧಿ ಮಾಡಿದ್ದರು. ಇರುವಂತದ್ದು ಒಟ್ಟಾಗಿ ಸೇರಿಸುವುದು ಮಹತ್ವದ ವಿಚಾರವಾಗಿದೆ. ಅದನ್ನು ಸಮರ್ಥವಾಗಿ ಮಾಡಿದ ಹಿರಿಮೆ ಮಹಾತ್ಮ ಗಾಂಧೀಜಿಗಿದೆ ಎಂದರು.



ವಿಚಾರ ವೇದಿಕೆಯ ಅಧ್ಯಕ್ಷ ಡಾ. ಪ್ರಭಾತ್ ಬಲ್ನಾಡ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಂಕರ ನಾಯ್ಕ್, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಅಂಡಾರು ಗುಣಪಾಲ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.ತುಕ್ರಪ್ಪ ಕೆಂಬಾರೆ ಪರಿಚಯಿಸಿದರು. ಡಾ.ಸುಧಾ ರಾಣಿ ಕಾರ್ಯಕ್ರಮ ನಿರ್ವಹಿಸಿದರು. 

ರೋಟರಿ ಕ್ಲಬ್ ಮೂಡುಬಿದಿರೆ, ಪ್ರೆಸ್ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್, ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟೌನ್, ಬಳಕೆದಾರರ ವೇದಿಕೆ, ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘ, ಪ್ರೌಢಶಾಲಾ ಸಹಶಿಕ್ಷಕರ ಸಂಘ, ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್, ಜೇಸಿಐ ಮೂಡುಬಿದಿರೆ ತ್ರಿಭುವನ್, ಲಯನ್ಸ್ ಕ್ಲಬ್, ಪಿಂಚಣಿದಾರರ ಸಂಘ ಹಾಗೂ ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಇವುಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.


Post a Comment

0 Comments