ಸಾಯಿ ಮಾರ್ನಾಡ್ ಸೇವಾ ಸಂಘದ ಕಾಳಜಿ
ವಿದ್ಯಾರ್ಥಿನಿಗೆ ಚಿಕಿತ್ಸೆಗೆ ನೆರವು
ಮೂಡುಬಿದಿರೆ : ಕಳೆದ ಮೂರು ತಿಂಗಳ ಹಿಂದೆ ಅಪಘಾತಕ್ಕೆ ಒಳಗಾಗಿ ಕಾಲಿನ ಮೂಳೆಮುರಿತಕ್ಕೊಳಪಟ್ಟು ನಡೆದಾಡಲು ಸಾಧ್ಯವಾಗದೆ ಅಸಹಾಯಕ ಸ್ಥಿತಿಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ವಿದ್ಯಾರ್ಥಿನಿಯ ಚಿಕಿತ್ಸೆಗೆ ಸಾಯಿ ಮಾರ್ನಾಡ್ ಸೇವಾ ಸಂಘ (ರಿ) ಅಮನಬೆಟ್ಟು ರೂ 10,000ವನ್ನು ನೀಡಿ ಸ್ಪಂದಿಸಿದೆ.
ಮೂಡುಬಿದಿರೆ ತಾಲೂಕು ಮೂಡುಮಾರ್ನಾಡಿನ ಡೆಕ್ಕಲ್ ನಿವಾಸಿಗಳಾಗಿರುವ ರಾಜೇಶ್-ಪ್ರಮೋದ ದಂಪತಿಯ ಪುತ್ರಿ, ದವಲಾ ಕಾಲೇಜಿನ ಪದವಿ ವಿದ್ಯಾರ್ಥಿನಿ ಮಮತ ಮೂರು ತಿಂಗಳ ಹಿಂದೆ ಕಾಲೇಜು ಮುಗಿಸಿ ಮನೆಗೆ ಬರುತ್ತಿರುವ ಸಂದರ್ಭದಲ್ಲಿ ದ್ವಿಚಕ್ರ ವಾಹನ ಢಿಕ್ಕಿ ಹೊಡೆದ ಪರಿಣಾಮವಾಗಿ ಕಾಲಿನ ಮುರಿತಕ್ಕೊಳಪಟ್ಟಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಮೂಳೆತಜ್ಞರಿಂದ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಆದರೆ ನಡೆದಾಡಲು ಒಂದು ಕಾಲು ಬೆಂಬಲ ನೀಡುತ್ತಿರಲಿಲ್ಲ.ಇದೀಗ ಪ್ರತಿ ತಿಂಗಳು ಮೂಳೆ ತಜ್ಞರಿಂದ ಚಿಕಿತ್ಸೆ ಪಡೆಯಬೇಕಾಗಿದೆ.
ಬಡ ಕುಟುಂಬವಾಗಿರುವುದರಿಂದ ಚಿಕಿತ್ಸೆಗೆ ಹಣಕಾಸಿನ ತೊಂದರೆಯಿರುವುದನ್ನರಿತ ಸಾಯಿ ಮಾರ್ನಾಡ್ ಸೇವಾ ಸಂಘವು ಮಮತ ಅವರ ಮನೆಗೆ ತೆರಳಿ ಚಿಕಿತ್ಸೆಗೆ ನೆರವು ನೀಡಿ ಮಾನವೀಯತೆ ಮೆರೆದಿದೆ.
ಸಾಯಿ ಮಾರ್ನಾಡ್ ಸೇವಾ ಸಂಘ (ರಿ) ಅಮನಬೆಟ್ಟು ಎನ್ನುವ ತಂಡವು ಕ್ರೀಡೆಯಲ್ಲಿ ಹಲವು ವರ್ಷದಿಂದ ಸಕ್ರಿಯ ವಾಗಿ ಭಾಗವಹಿಸುತ್ತಾ ಬಂದಿದ್ದು ಇದೀಗ ಕ್ರೀಡೆಯಲ್ಲಿ ಮಾತ್ರವಲ್ಲದೆ ಸಾಮಾಜಿಕ ನೆಲೆ ಯಲ್ಲಿ ಕಾರ್ಯನಿರ್ವಹಿಸಲು ಹೆಜ್ಜೆ ಹಾಕಿದ್ದು ಕಳೆದ ನವೆಂಬರ್ -2022 ನವೆಂಬರ ತಿಂಗಳಲ್ಲಿ ಸೇವಾ ಸಂಘವನ್ನು ಸ್ಥಾಪಿಸಿ ಬಡ ಕುಟುಂಬದವರಿಗೆ ಸಹಾಯಧನವನ್ನು ನೀಡುವ ಬಗ್ಗೆ ಯೋಜನೆ ಹಾಕಿ ಮಾರ್ಚ್ 2023 ರಂದು ಸಾಯಿ ಮಾರ್ನಾಡ್ ಟ್ರೋಫಿ ನಡೆಸಿ ಅದರಲ್ಲಿ ಉಳಿದ ಹಣವನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೀಡುತ್ತಾ ಬಂದಿದ್ದು ಮಾರ್ಚ್ ತಿಂಗಳಿಂಧ ಇದುವರೆಗೆ 13 ಬಡ ಕುಟುಂಬಗಳಿಗೆ ಸಹಾಯ ಹಸ್ತ ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಹೊಂದಿದೆ.
ಈ ತಂಡದಲ್ಲಿ ಒಟ್ಟು 175 ಸದಸ್ಯರಿದ್ದು ತಿಂಗಳಿಗೆ ಕನಿಷ್ಠ 100 ರೂವಿನಿಂದ ರೂ 1000 ವರೆಗೆ ಮಿಸಲಿಡುತ್ತಾ ಇದ್ದಾರೆ.
ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್( ರಿ.)ಅಮನಬೆಟ್ಟು, ಪಡುಮಾರ್ನಾಡ್ ಎಂಬ ಹೆಸರಿನಲ್ಲಿ ರಿಜಿಸ್ಟ್ರೇಷನ್ ಆಗಿರುತ್ತದೆ. .
0 Comments