*ಹಿಂದೂ ಜನಜಾಗೃತಿ ಸಮಿತಿಯ ಪ್ರಸಿದ್ಧಿ ಪತ
*ವಿಶೇಷ ಸಂವಾದ : ಗಣೇಶೋತ್ಸವದಿಂದ ಜಲ ಮಾಲಿನ್ಯವಾಗುತ್ತದೆಯೇ ?*
*ಮಾಲಿನ್ಯದ ಹೆಸರಿನಲ್ಲಿ ಗಣೇಶೋತ್ಸವ ಅಲ್ಲದೆ, ಅನೇಕ ಹಬ್ಬ ಉತ್ಸವಗಳ ಮೇಲೆ ನಿಷೇಧ ತರುವ ಷಡ್ಯಂತ್ರ !* ನ್ಯಾಯವಾದಿ ಸತೀಶ ದೇಶಪಾಂಡೆ
ಕಸಾಯಿಖಾನೆ ಮತ್ತು ಕಾರ್ಖಾನೆಗಳಿಂದ ಮಾಲಿನ್ಯ ಆಗುತ್ತದೆ, ಅದು ಗೋದಾವರಿ, ಯಮುನಾ ಮುಂತಾದ. ಅನೇಕ ನದಿಗಳ ಬಗ್ಗೆ ಸರಕಾರದಿಂದ ನೀಡಲಾಗಿರುವ ವರದಿಯಿಂದ ಸ್ಪಷ್ಟವಾಗಿದೆ ; ಆದರೆ ಗಣೇಶೋತ್ಸವದಿಂದ ಮಾಲಿನ್ಯವಾಗುತ್ತದೆ , ಇದರ ಅಧಿಕೃತ ಮಾಹಿತಿ, ಅಂಕಿ ಸಂಖ್ಯೆ ಕೂಡ ಯಾರ ಬಳಿ ಇಲ್ಲ. ಹಾಗಾದರೆ ಗಣೇಶ ಮೂರ್ತಿಯ ವಿಸರ್ಜನೆಯಿಂದ ಮಾಲಿನ್ಯ ಆಗುತ್ತದೆ, ಇದು ಯಾವ ಆಧಾರದಲ್ಲಿ ಹೇಳಲಾಗುತ್ತದೆ ?
ಗಣೇಶೋತ್ಸವ ಅಲ್ಲದೆ , ಹಿಂದುಗಳ ಎಲ್ಲಾ ಹಬ್ಬ ಉತ್ಸವಗಳ ಮೇಲೆ ವಿವಿಧ ರೀತಿಯ ನಿಷೇಧ ತರುವ ಷಡ್ಯಂತ್ರವಾಗಿದೆ. ಗಣೇಶ ಮೂರ್ತಿಯ ವಿಸರ್ಜನೆಯಿಂದ ಮಾಲಿನ್ಯ ಆಗುವುದಿಲ್ಲ. ಇದು ಹಿಂದೂಗಳು ಗಮನದಲ್ಲಿಟ್ಟುಕೊಳ್ಳಬೇಕು. ಹಿಂದುಗಳು ಇದರ ಬಗ್ಗೆ ಧ್ವನಿ ಎತ್ತಬೇಕು ಮತ್ತು ಜಾಗೃತಿ ಮಾಡಬೇಕು. ಹೀಗೆ ಇತಿಹಾಸ ಮತ್ತು ಸಂಸ್ಕೃತಿ ಅಧ್ಯಯನಕಾರರಾದ ನ್ಯಾಯವಾದಿ ಸತೀಶ ದೇಶಪಾಂಡೆ ಇವರು ಕರೆ ನೀಡಿದರು. *ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗಣೇಶೋತ್ಸವದಿಂದ ಮಾಲಿನ್ಯ ಆಗುತ್ತದೆಯೆ?* ಈ ವಿಷಯದ ಬಗ್ಗೆ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು .
ಆ ಸಮಯದಲ್ಲಿ ಕೊಲ್ಹಾಪುರ ಇಲ್ಲಿಯ *ಹಿಂದೂ ಏಕತಾ ಆಂದೋಲನದ ಜಿಲ್ಲಾಧ್ಯಕ್ಷ ಶ್ರೀ ದೀಪಕ ದೇಸಾಯಿ ಇವರು,* ಹರಿಯುವ ನೀರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು ಎಂದು ಧರ್ಮದ ಪರಂಪರೆಯಾಗಿದೆ. ಆದರೆ ಇಂದು ಹರಿಯುವ ನೀರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲು ಪೊಲೀಸು ಸರಕಾರದಿಂದ ವಿರೋಧವಾಗುತ್ತದೆ ಮತ್ತು ಇದು ಯಾವ ಆಧಾರದಲ್ಲಿ ಮಾಡಲಾಗುತ್ತದೆ. ಹಾಗೂ ನ್ಯಾಯಾಲಯದ ಯಾವ ಆದೇಶದ ಪ್ರಕಾರ ಮಾಡಲಾಗುತ್ತಿದೆ, ಇದರ ಬಗ್ಗೆ ಪೊಲೀಸ್ ಸರಕಾರದ ಬಳಿ ಸಮರ್ಪಕ ಉತ್ತರವಿಲ್ಲ ಕೊಲ್ಲಾಪುರದಲ್ಲಿನ ಪಂಚಗಂಗಾ ನದಿಯಲ್ಲಿ ೬ ರಿಂದ ೭ ನಾಲೆಗಳ ಮತ್ತು ಕಾರ್ಖಾನೆಯ ನೀರು ಹರಿಸಲಾಗುತ್ತದೆ, ಇದರ ಕಡೆ ಸರಕಾರ ಗಮನ ನೀಡುವುದಿಲ್ಲ; ಆದರೆ ಗಣೇಶೋತ್ಸವ ಬಂದರೆ ಮಾತ್ರ ಮಾಲಿನ್ಯದ ಹೆಸರಿನಲ್ಲಿ ಎಚ್ಚರವಾಗುತ್ತಾರೆ. ಹಿಂದೂಗಳ ಪದ್ಧತಿ ಪರಂಪರೆ ನಿಲ್ಲಿಸಲು ಇದೆಲ್ಲವೂ ಮಾಡಲಾಗುತ್ತದೆ ಎಂದು ಇದರಿಂದ ಕಾಣುತ್ತದೆ ಎಂದು ಹೇಳಿದರು.
*ಹಿಂದೂ ಜನಜಾಗೃತಿ ಸಮಿತಿಯ ಮುಂಬಯಿ ವಕ್ತಾರರಾದ ಶ್ರೀ. ಸತೀಶ ಕೋಚರೇಕರ ಇವರು,* ಗಣೇಶೋತ್ಸವದಲ್ಲಿ ಮಾಲಿನ್ಯ ಆಗುತ್ತದೆ, ಹೇಗೆ ನಾಗರೀಕರಲ್ಲಿ ತಥಾಕಥಿತ ಪರ್ಯಾವರಣವಾದಿಗಳಿಂದ, ವಿಜ್ಞಾನಿಗಳಿಂದ, ಅಂಧ ಶ್ರದ್ಧಾ ನಿರ್ಮೂಲನ ಸಮಿತಿಗಳಿಂದ ಭ್ರಮೆ ನಿರ್ಮಾಣ ಮಾಡಲಾಗಿದೆ. ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾರ್ಚ್ ೨೦೨೩ ರಲ್ಲಿ ಬಹಿರಂಗ ಪಡಿಸಿರುವ ಪುಸ್ತಕದಲ್ಲಿ ಎಲ್ಲಕ್ಕಿಂತ ಅಪಾಯಕಾರಿ ಮಾಲಿನ್ಯ ನದಿಯಲ್ಲಿ ಮುಂಬಯಿಯಲ್ಲಿನ ಮಿಠಾ ನದಿ, ನಾಗಪುರದಲ್ಲಿನ ಕನ್ಹಾನ ನದಿ, ಪುಣೆ ಯಲ್ಲಿನ ಮುಳ ಮುಠಾ ನದಿಯ ಉಲ್ಲೇಖ ಮಾಡಲಾಗಿದೆ. ಮಾರ್ಚಿನಲ್ಲಿ ಗಣೇಶೋತ್ಸವ ಇರುವುದಿಲ್ಲ, ಹಾಗಾದರೆ ಈ ಮಾಲಿನ್ಯ ಯಾವುದು ? ಕಾರ್ಖಾನೆ, ಕಸಾಯಿಖಾನೆ ಇವುಗಳಿಂದ ವರ್ಷಪೂರ್ತಿಯಾಗುವ ಮಾಲಿನ್ಯದ ಬಗ್ಗೆ ಧ್ವನಿ ಎತ್ತದೆ ಇರುವ ವಿಜ್ಞಾನಿಗಳು, ಸೆಲೆಬ್ರಿಟಿಗಳು ಮಾತ್ರ ಗಣೇಶೋತ್ಸವದಲ್ಲಿ ಮಾಲಿನ್ಯವಾಗುತ್ತದೆ, ಇದರ ಬಗ್ಗೆ ಮಾತನಾಡುವುದು ಕಾಣುತ್ತದೆ. ಕಾರ್ಖಾನೆ ಮತ್ತು ಕಸಾಯ ಕಾಖಾಯಿಂದ ಆಗುವ ಮಾಲಿನ್ಯ ತಡೆಯುವದಕ್ಕಾಗಿ ಅವರು ಏನು ಮಾಡಿದ್ದಾರೆ ? ಕಳೆದ ೧೦ - ೧೨ ವರ್ಷಗಳಿಂದ ಕೃತ್ರೀಮ ಟ್ಯಾಂಕುಗಳಿಂದ ಮಾಲಿನ್ಯ ಕಡಿಮೆ ಆಗಿದೆ, ಹೇಗೆ ಸರಕಾರ ಅಂಕಿ ಸಂಖ್ಯೆಯ ಸಹಿತ ಬಹಿರಂಗಪಡಿಸುವುದೇ ? ಹಿಂದೂಗಳ ಗಣೇಶೋತ್ಸವ ಮತ್ತು ಇತರ ಹಬ್ಬದಲ್ಲಿ ಮಾಲಿನ್ಯ ನಿರ್ಮಾಣ ಮಾಡುವುದಿಲ್ಲ, ತದ್ವಿರುದ್ಧ ಜೀವನದಲ್ಲಿ ಜ್ಞಾನ ಮತ್ತು ಆನಂದದ ವೃದ್ಧಿ ಮಾಡುತ್ತವೆ. ಗಣೇಶೋತ್ಸವ ಮತ್ತು ಹಿಂದೂಗಳ ಹಬ್ಬ ಉತ್ಸವದಲ್ಲಿ ಮಾಲಿನ್ಯ ಆಗುತ್ತದೆ, ಎಂಬ ಭ್ರಮೆಯಿಂದ ಹಿಂದೂಗಳು ಹೊರಬಂದು ತಮ್ಮ ಹಬ್ಬ ಉತ್ಸವಗಳನ್ನು ಆಚರಿಸಬೇಕು, *ಎಂದು ಶ್ರೀ. ಕೋಚರೆಕರ ಇವರು ಕೊನೆಯಲ್ಲಿ ಹೇಳಿದರು.*
0 Comments