ಮಾಂಟ್ರಾಡಿ ಶಾಲೆ ಶಿಕ್ಷಕಿ ಶ್ರೀಮತಿ ಮಾರ್ಗರೆಟ್ ಮಸ್ಕರೇನಸ್ ಇವರಿಗೆ ಬೀಳ್ಕೊಡುಗೆ

ಜಾಹೀರಾತು/Advertisment
ಜಾಹೀರಾತು/Advertisment

ಮಾಂಟ್ರಾಡಿ





 ಸ ಉ ಹಿ ಪ್ರಾ ಶಾಲೆ ಮಾಂಟ್ರಾಡಿ ಯಲ್ಲಿ 25 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಬೇರೆ ಶಾಲೆಗೆ ವರ್ಗಾವಣೆಗೊಂಡ ಶ್ರೀಮತಿ ಮಾರ್ಗರೆಟ್ ಮಸ್ಕರೇನಸ್ ಇವರಿಗೆ ಬೀಳ್ಕೊಡುಗೆ ಸಮಾರಂಭವು ದಿನಾಂಕ 01/09/2023ರಂದು ನಡೆಯಿತು.ನೆಲ್ಲಿಕಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ಉದಯ ಪೂಜಾರಿಯವರು ಮುಖ್ಯ ಅತಿಥಿಗಳಾಗಿ ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ರಾಜೇಶ್ ಇವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು,ಸದಸ್ಯರು, ಬೋರುಗುಡ್ಡೆ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಯುತ ಆದರ್ಶಕಟ್ಟಿನಮಕ್ಕಿ, ಶಾಲೆಯ ಎಸ್ ಡಿ ಎಂ ಸಿ ಸದಸ್ಯರು,ಪೋಷಕರು,ಊರಿನ ವಿದ್ಯಾ ಅಭಿಮಾನಿಗಳು, ಹಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಜರಿದ್ದರು. ಹಳೆ ವಿದ್ಯಾರ್ಥಿ ರಾಕೇಶ್ ರವರು ಶಿಕ್ಷಕಿಯ ಉನ್ನತ ಗುಣಗಳನ್ನು ಸ್ಮರಿಸಿಕೊಂಡರು. ಎಲ್ಲರೂ ಶಿಕ್ಷಕಿಯವರು ಶಾಲೆಗೆ ನೀಡಿದ ಸೇವೆಯನ್ನು ಶ್ಲಾಘಿಸಿ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ಶಿಕ್ಷಕರಾದ ಶ್ರೀಮತಿ ಜಾನೆಟ್ ಲೋಬೊ ಇವರು ಸಹೋದ್ಯೋಗಿಗಳ ಪರವಾಗಿ ಅನಿಸಿಕೆ ಹಂಚಿಕೊಂಡರು ಶ್ರೀಮತಿ ಮೃದುಲಾ ಇವರು ಸ್ವಾಗತಿಸಿದರು. ಶ್ರೀಯುತ ರಂಗನಾಥ್ ರವರು ಕಾರ್ಯಕ್ರಮ ನಿರೂಪಿಸಿದರು ಶ್ರೀಮತಿ ರೂಪ ಅಭಿನಂದನಾ ಪತ್ರ ವಾಚಿಸಿದರು ಹಾಗೂ ಶ್ರೀಮತಿ ಪ್ರತಿಮಾ ನಾಯ್ಕ್ ಇವರು ವಂದಿಸಿದರು. ಈ ಸಂದರ್ಭದಲ್ಲಿ ವರ್ಗಾವಣೆಗೊಂಡ ಶಿಕ್ಷಕಿ  ಶ್ರೀಮತಿ ಮಾರ್ಗರೆಟ್ ಮಸ್ಕರೇನಸ್ ಶಾಲೆಗೆ ಸ್ಮಾರ್ಟ್ ಟಿವಿಯನ್ನು ಕೊಡುಗೆ ಯಾಗಿ ನೀಡಿದರು.

Post a Comment

0 Comments