ದೌರ್ಜನ್ಯ ವಿರುದ್ಧ ಸೌಜನ್ಯ ಪಾದಾಯಾತ್ರೆಗೆ ಮೂಡುಬಿದಿರೆ ಜನರ ಬೆಂಬಲ
ಮೂಡುಬಿದಿರೆ: ಸೌಜನ್ಯ ಸಹಿತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರವನ್ನು ವಿರೋಧಿಸಿ ಕರ್ನಾಟಕ ರಾಷ್ಟç ಸಮಿತಿ ಪಕ್ಷ ವತಿಯಿಂದ ಧರ್ಮಸ್ಥಳದಿಂದ ಬೆಂಗಳೂರಿನವರೆಗೆ ಅ.26ರಿಂದ ನಡೆಯಲಿರುವ ದೌರ್ಜನ್ಯ ವಿರುದ್ಧ ಸೌಜನ್ಯ ಪಾದಯಾತ್ರೆಗೆ ಮೂಡುಬಿದಿರೆಯಲ್ಲಿ ಕೆಆರ್‌ಎಸ್ ಕಾರ್ಯಕರ್ತರು ಮಾತ್ರವಲ್ಲದೆ, ಮೂಡುಬಿದಿರೆ ಜನರು ಬೆಂಬಲ ಸೂಚಿಸಿದ್ದಾರೆ. ಆನ್‌ಲೈನ್ ಮೂಲಕ ನೂರಾರು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೆಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ದಯಾನಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುಮಾರು 14 ದಿನಗಳು ನಡೆಯಲಿರುವ ಸುಮಾರು 330 ಕಿ.ಮೀ ಈ ಪಾದಯಾತ್ರೆಯಲ್ಲಿ ಕೆಆರ್‌ಎಸ್ ಪಕ್ಷವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ರಾಜ್ಯದ ಜನತೆಯ ಪರವಾಗಿ ಹಕ್ಕೋತ್ತಾಯ ಮಂಡಿಸಲಿದೆ. ಸೌಜನ್ಯ ಹತ್ಯೆ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣವೇ ಮರು ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು. ಪ್ರಕರಣಕ್ಕೆ ಸಂಬAಧಿಸಿದAರತೆ ವಿಶೇಷ ಪೊಲೀಸ್ ತನಿಖಾ ತಂಡ ರಚಿಸಿ ಪರ್ಯಾಯವಾಗಿ ಈಗಾಗಲೇI ತನಿಖೆ ಮಾಡಿರುವ ತನಿಖಾಧಿಕಾರಿಗಳು ಸಮರ್ಪಕವಾಗಿ ಮತ್ತು ವೃತ್ತಿಪರವಾಗಿ ತನಿಖೆ ನಡೆಸಿಲ್ಲ ಎನ್ನುವ ಆರೋಪಗಳ ಹಿನ್ನಲೆಯಲ್ಲಿ ಅವರನ್ನೂ ತನಿಖೆ ಒಳಪಡಿಸಬೇಕು ಎನ್ನವ ಅಹವಾಲು ಸಹಿತ ಸೌಜನ್ಯ ಪ್ರಕರಣ ಹಾಗೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಕೆಆರ್‌ಎಸ್ ಸರ್ಕಾರವನ್ನು ಈ ಪಾದಯಾತ್ರೆಯ ಮೂಲಕ ಒತ್ತಾಯಿಸಲಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ಸುನೀತಾ ರೊಸರಿಯಾ, ಸದಸ್ಯ ಲತೀಶ್ ಸುದ್ದಿಗೋಷ್ಠಿಯಲ್ಲಿದ್ದರು.
0 Comments