ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವಗುಣವನ್ನು ಬೆಳೆಸಿಕೊಳ್ಳಬೇಕು. -
ಶ್ರೀ ರುಕ್ಕಯ್ಯ ಪೂಜಾರಿ.
ಮೂಡುಬಿದಿರೆ: ಇಲ್ಲಿನ ಬಾಬು ರಾಜೇಂದ್ರ ಪ್ರಸಾದ ಪ್ರೌಢಶಾಲೆಯಲ್ಲಿ ಸಂಸತ್ತು ಮತ್ತು ಇತರ ಸಂಘಗಳ ಉದ್ಘಾಟನೆ ಗುರುವಾರ ನಡೆಯಿತು.
ತಾ.ಪಂ.ಮಾಜಿ ಸದಸ್ಯ ರುಕ್ಕಯ್ಯ ಪೂಜಾರಿ ಅವರು ಶಾಲಾ ಸಂಸತ್ತು ಮತ್ತು ಇತರ ಸಂಘಗಳನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವಗುಣವನ್ನು ಬೆಳೆಸಿಕೊಳ್ಳಬೇಕು.
ಗುರುಹಿರಿಯರ ಮಾರ್ಗದರ್ಶನದಿಂದ ಸುಂಸ್ಕೃತರಾಗಿ ಯೋಜಿತ ಕಾರ್ಯ ಮಾಡಿದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಛಲದಿಂದ ಒಳ್ಳೆಯಕೆಲಸ ಮಾಡಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಹಾವೀರ ಕಾಲೇಜಿನ ಉಪನ್ಯಾಸಕಿ ಪೂರ್ಣಿಮಾ ಶೆಟ್ಟಿ ಭಾಗವಹಿಸಿ ಸಂಸತ್ತಿನ ಕಾರ್ಯವಿಶ್ಲೇಷಣೆಯ ಕುರಿತು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಶಿಕ್ಷಕಿ ತೆರೆಸಾ ಕರ್ಡೋಜಾ ಅಧ್ಯಕ್ಷತೆ ವಹಿಸಿ ನೂತನ ಮಂತ್ರಿಮಂಡಲದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ಕುಮಾರಿ ಸಾಂಚಿತಾ ಸ್ವಾಗತಿಸಿದರು.
ಕುಮಾರ ಆಕರ್ಷ ಪ್ರಾರ್ಥಿಸಿದರು.
ಕುಮಾರಿ ಗಾನವಿ ಕಾರ್ಯಕ್ರಮ ನಿರ್ವಹಿಸಿದರು.
0 Comments