ಯಶಸ್ವಿಯಾದ ಚಂದ್ರಯಾನ-೩ : ನೇರ ಪ್ರಸಾರ
ಮೂಡುಬಿದಿರೆಯಲ್ಲಿ ಸಂಭ್ರಮ
ಮೂಡುಬಿದಿರೆ : ಚಂದ್ರಯಾನ -೩ರ ಪ್ರಯತ್ನದಲ್ಲಿ 'ವಿಕ್ರಮ' ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ನಲ್ಲಿ ಚಂದ್ರ ಗ್ರಹದ ಮೇಲೆ ಇಳಿದು ಯಶಸ್ವಿಯಾಗುತ್ತಿದ್ದಂತೆ ಮೂಡುಬಿದಿರೆ ತಾಲೂಕಿನಾದ್ಯಂತ ಆಸಕ್ತ ನಾಗರಿಕರು, ಶಿಕ್ಷಕರು, ವಿದ್ಯಾರ್ಥಿಗಳು ಸಂಭ್ರಮ ಆಚರಿಸಿಕೊಂಡರು.
ತಾಲೂಕಿನ ಶ್ರೀ ಮಹಾವೀರ ಕಾಲೇಜಿನಲ್ಲಿ ಸಂಜೆ ೫.೩೦ರಿಂದ ೬.೩೦ರವರೆಗೆ ಚಂದ್ರಯಾನದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.
`ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾದ ಭಾರತವು ನಾಲ್ಕನೇ ದೇಶ ಎಂಬುದೊಂದು ದಾಖಲೆಯಾಗಿದೆ. ಅದರಲ್ಲೂ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಆಗುವುದು ಬಹಳ ಕಷ್ಟಕರ. ಇದರಲ್ಲಿ ಯಶಸ್ವಿಯಾದ ಮೊತ್ತ ಮೊದಲ ದೇಶ ಭಾರತ ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿ' ಎಂದು
ಶ್ರೀ ಮಹಾವೀರ ಪ.ಪೂ. ಕಾಲೇಜಿನ ಪ್ರಾಚಾರ್ಯ, ಹವ್ಯಾಸಿ ಖಗೋಲಾಭ್ಯಾಸಿಗಳ ಸಂಘದ ಪ್ರಮುಖರಾದ ಪ್ರೊ. ಎಂ. ರಮೇಶ ಭಟ್ ಹೇಳಿದರು.
ಶ್ರೀ ಮಹಾವೀರ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ರಾಧಾಕೃಷ್ಣ , ಹಳೆವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಸುರೇಶ ಶೆಟ್ಟಿ , ಆವರಣದ ಕಾಲೇಜುಗಳ ಸಿಬಂದಿ ಉಪಸ್ಥಿತರಿದ್ದರು.
0 Comments