ಶ್ರೀ ಪಂಚಶಕ್ತಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

ಜಾಹೀರಾತು/Advertisment
ಜಾಹೀರಾತು/Advertisment

 ಶ್ರೀ ಪಂಚಶಕ್ತಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

 14,16,932 ನಿವ್ವಳ ಲಾಭದಲ್ಲಿ ಸಂಘ



ಮೂಡುಬಿದಿರೆ: ಇಲ್ಲಿನ ಶ್ರೀ ಪಂಚಶಕ್ತಿ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘವು  ಸ್ಥಾಪನೆಯಾದಂದಿನಿಂದ 8 ವರ್ಷಗಳ ಅವಧಿಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದು 2022-23ನೇ ಸಾಲಿನಲ್ಲಿ ರೂ 14,16,932 ನಿವ್ವಳ ಲಾಭವನ್ನು ಗಳಿಸಿದ್ದು  ಲೆಕ್ಕಪರಿಶೋಧನೆಯಲ್ಲಿ ‘ಎ’ ಗ್ರೇಡ್ ಹೊಂದಿದೆ. ಸದಸ್ಯರಿಗೆ ಈಗಾಗಲೇ 12ಶೇ. ಲಾಭಾಂಶ ನೀಡಲು ನಿರ್ಧರಿಸಿದ್ದು ಸಹಕಾರಿಯಿಂದ ಪ್ರಸಕ್ತ ವರ್ಷ ಪಿಗ್ಮಿ ಲೋನ್ ನೀಡಲು ನಿರ್ಧರಿಸಲಾಗಿದೆ. ಮುಂದಿನ ದಶಮಾನೋತ್ಸವದ ಸಂದರ್ಭದಲ್ಲಿ ಆಡಳಿತ ನಿದೇಶಕರ ಸಹಕಾರೊಂದಿಗೆ ವಿಶೇಷ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಸಹಕಾರಿ ಸಂಘದ ಅಧ್ಯಕ್ಷ ರಂಜಿತ್ ಪೂಜಾರಿ ತಿಳಿಸಿದರು.  



   ಅವರು ಮೂಡುಬಿದಿರೆಯ ಸಮಾಜ ಮಂದಿರದ ಸ್ವರ್ಣ ಭವನದಲ್ಲಿ ಭಾನುವಾರ ನಡೆದ 2022-23ರ ಸಾಲಿನ  ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸ್ವಸಹಾಯ ಗುಂಪುಗಳಲ್ಲಿ ಯಾರಾದರೂ ಮೃತರಾದಲ್ಲಿ ಅವರು ಪಡೆದ ಸಾಲಕ್ಕೆ ಭದ್ರತೆಯನ್ನು ಅಳವಡಿಸಲಾಗಿದೆ ಎಂದು ಹೇಳಿದರು.



ಅತೀ ಹೆಚ್ಚು ಪಿಗ್ಮಿ ಸಂಗ್ರಹಣೆ ಮಾಡಿದ ದಿನೇಶ್ ಪೂಜಾರಿಯವರನ್ನು  ಉತ್ತಮ ಗ್ರಾಹಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಸಕ್ತರಿಗೆ ಶಿಕ್ಷಣ ಮತ್ತು ಅನಾರೋಗ್ಯದ ಸಹಾಯಧನ ವಿತರಣೆ, 36 ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ ಉತ್ತಮ ಸ್ವಸಹಾಯ ತಂಡಗಳನ್ನು ಸನ್ಮಾನಿಸಲಾಯಿತು.


  ನಿರ್ದೇಶಕ ರಮೇಶ್ ಶೆಟ್ಟಿ ಸ್ವಾಗತಿಸಿದರು.ಮುಖ್ಯಕಾರ್ಯನಿರ್ವಹಣಾಧಿಕಾರಿ ಯು. ಆರ್ ಮಧ್ಯಸ್ಥ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ನಿರ್ದೇಶಕರಾದ  ರಾಜೇಂದ್ರ ಬಿ.ಲಾಭಾಂಶ ವಿಂಗಡನೆಯನ್ನು ತಿಳಿಸಿದರು. ರತ್ನಾಕರ ಪೂಜಾರಿ ಅವರು ಗುಂಪುಗಳ ಲಾಭಾಂಶ ವಿಂಗಡನೆಯ ಮಾಹಿತಿ ನೀಡಿದರು. ಶಂಕರ  ನಾರಾಯಣ ಭಟ್ ಲೆಕ್ಕ ಪರಿಶೋಧನೆಯ ಪಾಲನ ವರದಿಯನ್ನು, ಸುರೇಶ್ ಕೆ. ಪೂಜಾರಿ ಅವರು 2022-23 ನೇ ಸಾಲಿನ ನಡಾವಳಿಗಳನ್ನು ಮಂಡಿಸಿದರು.ಸಿಬಂದಿ ಗಣೇಶ್ ಆರ್ .ನಾಯ್ಕ್ ಅವರು ಪರಿಶೋಧಿತ ಲೆಕ್ಕಪತ್ರಗಳನ್ನು, ಪ್ರತಿಭಾ ಅವರು ಬಜೆಟನ್ನು, ಸ್ವಾತಿ ಖರ್ಚಿನ ವಿವರವನ್ನು  ಮಂಡಿಸಿದರು. ರೇಖಾ ಅವರು 'ಎ' ಗ್ರೇಡ್ ಬಂದಿರುವ ತಂಡಗಳ ಮಾಹಿತಿ ನೀಡಿದರು.

   ನಿರ್ದೇಶಕರುಗಳಾದ  ಶರತ್ ಜೆ. ಶೆಟ್ಟಿ,  ರವೀಂದ್ರ ಕರ್ಕೇರ,   ನಾಗೇಶ್ ನಾಯ್ಕ್, ಹೇಮಾ ಕೆ. ಪೂಜಾರಿ ವೇದಿಕೆಯಲ್ಲಿದ್ದರು.


ಗೋಪಾಲ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಉಷಾ ಭಂಡಾರಿ ವಂದಿಸಿದರು. ಧರ್ಮರಾಜ್ ಶೆಟ್ಟಿ ಸಹಕರಿಸಿದರು.

Post a Comment

0 Comments