ಶೃಂಗೇರಿ ಮಠಕ್ಕೆ ಪುಂಗನೂರು ತಳಿ ಗೋವುಗಳನ್ನು ದಾನವಾಗಿ ನೀಡಿದ ಉಡುಪಿ ಬಿಜೆಪಿ ಅಧ್ಯಕ್ಷ:ಗೋಶಾಲೆಯಲ್ಲಿ ಸ್ಥಾನ ಪಡೆದ ಅಪರೂಪದ ತಳಿ
ಅತಿ ವಿರಳ ಪುಂಗನೂರು ತಳಿಯ ಒಂದು ಗೋವು ಮತ್ತು ಒಂದು ಎತ್ತನ್ನು ಶೃಂಗೇರಿ ಮಠಕ್ಕೆ ದಾನವಾಗಿ ಉಡುಪಿ ಬಿಜೆಪಿ ನಗರಾಧ್ಯಕ್ಷರಾದ ಮಹೇಶ್ ಠಾಕೂರ್ ರವರು ನೀಡಿದ್ದಾರೆ.
ಅಧಿಕ ಮಾಸದ ಪ್ರಯುಕ್ತ ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಕೆ ರಘುಪತಿ ಭಟ್ ದಂಪತಿಗಳ ಸಮೇತವಾಗಿ ಶೃಂಗೇರಿಗೆ ಆಗಮಿಸಿದ ಮಹೇಶ್ ಠಾಕೂರ್ ಕುಟುಂಬ ಈ ಗೋವುಗಳನ್ನು ಉಡುಗೊರೆಯಾಗಿ ನೀಡಿದರು.
ಈ ಬಗ್ಗೆ ಸಂತಸ ಹಂಚಿಕೊಂಡ ಮಹೇಶ್ ಠಾಕೂರ್ ರವರು "ಇಂದು ಶೃಂಗೇರಿ ಮಠದ ಪರಮಪೂಜ್ಯ ಯತಿವರ್ಯರನ್ನು ಭೇಟಿಯಾದೆವು. ಅಧಿಕ ಮಾಸದ ಕಾರಣ ಅವರ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಗೋವುಗಳಲ್ಲೇ ಅತಿಶ್ರೇಷ್ಠ ಹಾಗೂ ಅತ್ಯಂತ ವಿರಳ ತಳಿಯಾಗಿರುವ ಪುಂಗನೂರು ತಳಿಯ ಒಂದು ಗೋವು ಮತ್ತೊಂದು ಎತ್ತನ್ನು ಶೃಂಗೇರಿ ಮಠಕ್ಕೆ ನೀಡಿದ್ದು ಅತ್ಯಂತ ಧನ್ಯತಾ ಭಾವವನ್ನು ಮೂಡಿಸಿದೆ. ಈ ಸಂದರ್ಭದಲ್ಲಿ ನಮ್ಮ ನಾಯಕರು, ಮಾಜಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ರವರು ದಂಪತಿ ಸಮೇತವಾಗಿ ಜೊತೆಗಿದ್ದದ್ದು ಮತ್ತಷ್ಟು ಖುಷಿ ತಂದಿತು" ಎಂದು ಹೇಳಿಕೊಂಡಿದ್ದಾರೆ.
0 Comments