ಮೂಡುಬಿದಿರೆ ಬಿಲ್ಲವ ಸಂಘದಿಂದ ಆಟಿಡೊಂಜಿ ದಿನ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ ಬಿಲ್ಲವ ಸಂಘದಿಂದ ಆಟಿಡೊಂಜಿ ದಿನ 



ಮೂಡುಬಿದಿರೆ:  ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮೂಡುಬಿದಿರೆ, ಶ್ರೀ ನಾರಾಯಣಗುರು ಸೇವಾದಳ, ಶ್ರೀ ನಾರಾಯಣ ಗುರು ಮಹಿಳಾ ಘಟಕದ ಸಹಯೋಗದಲ್ಲಿ ಕಾಮಧೇನು ಸಭಾಭವನದಲ್ಲಿ  ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ನೇತ್ರ ತಜ್ಞೆ ಡಾ.ಮಾಲಿನಿ ಬಂಗೇರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತಂತ್ರಜ್ಞಾನದ ಕಾಲಘಟ್ಟದಲ್ಲಿ ನಾವು ನಮ್ಮ ಪಾರಂಪರಿಕ ಆಚರಣೆಗಳಿಂದ ದೂರವಾಗುತ್ತಿದ್ದೇವೆ. ತುಳುನಾಡಿನ ಆಚರಣೆ ಬಾಂಧವ್ಯವನ್ನು ಬೆಳೆಸುವಂತದ್ದು. ಆರೋಗ್ಯವನ್ನು ಕೆಡಿಸುವ ಫಾಸ್ಟ್ಫುಡ್‌ಗಿಂತ ರೋಗನಿರೋಧಕ ಶಕ್ತಿ ಹೊಂದಿರುವ ಮನೆಯಲ್ಲಿ ಮಾಡಿದ ಆಹಾರ ಸೇವಿಸಬೇಕು ಎಂದು  ಹೇಳಿದರು. 


ವಕೀಲೆ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಶೈಲಜಾ ರಾಜೇಶ್ ಆಟಿ ತಿಂಗಳ ಮಹತ್ವದ ಕುರಿತು ಮಾತನಾಡಿದರು. 

ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ಕೇಶವ ಅಧ್ಯಕ್ಷತೆ ವಹಿಸಿದರು. 

ನಾಟಿ ವೈದ್ಯೆ ಅಪ್ಪಿ ಪೂಜಾರಿ ಕರಿಂಜೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿನಿ ಸುಮೀಕ್ಷಾ ಅವರನ್ನು ಸನ್ಮಾನಿಸಲಾಯಿತು. 

ವಕೀಲೆ ಮಲ್ಲಿಕಾ ಬಿ.ಪೂಜಾರಿ ಮುಖ್ಯ ಅತಿಥಿಯಾಗಿದ್ದರು. ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ.ಪೂಜಾರಿ, ಸೇವಾದಳದ ಅಧ್ಯಕ್ಷ ರಾಜ್ ಎಸ್.ಸನಿಲ್ ಉಪಸ್ಥಿತರಿದ್ದರು. 

ಪ್ರೀತಿಕಾ ಸಂದೀಪ್ ಸ್ವಾಗತಿಸಿದರು. ಉಷಾ ಮಧುಕರ್, ಮಮತಾ ನಾರಾಯಣ್ ಸನ್ಮಾನ ಪತ್ರ ವಾಚಿಸಿದರು. ಪ್ರಜ್ವಲ್ ಕಾರ್ಯಕ್ರಮ ನಿರೂಪಿಸಿದರು. ಸುಶ್ಮಿತಾ ವಂದಿಸಿದರು.

Post a Comment

0 Comments