ವೀಡಿಯೋ ಇಲ್ಲ ಮಾತ್ರಕ್ಕೆ ಪ್ರಕರಣ ಕೈ ಬಿಡಲು ಸಾಧ್ಯವೇ:ಉಡುಪಿ ಪ್ರಕರಣಕ್ಕೆ ಸುದರ್ಶನ ಎಂ ಪ್ರಶ್ನೆ

ಜಾಹೀರಾತು/Advertisment
ಜಾಹೀರಾತು/Advertisment

 ವೀಡಿಯೋ ಇಲ್ಲ ಮಾತ್ರಕ್ಕೆ ಪ್ರಕರಣ ಕೈ ಬಿಡಲು ಸಾಧ್ಯವೇ:ಉಡುಪಿ ಪ್ರಕರಣಕ್ಕೆ ಸುದರ್ಶನ ಎಂ ಪ್ರಶ್ನೆ




ಹಿಂದೂ ವಿದ್ಯಾರ್ಥಿನಿಯರ ಬಾತ್‌ರೂಮ್ ವೀಡಿಯೋ ಮಾಡುತ್ತಿದ್ದ ಮುಸ್ಲಿಂ ಸಮುದಾಯದ ಯುವತಿಯರ ಪ್ರಕರಣ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಹಗುರವಾಗಿ ಪರಿಗಣಿಸುತ್ತಿದ್ದನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಖಂಡಿಸಿದ್ದಾರೆ.


ವಿದ್ಯಾರ್ಥಿನಿಯರ‌ ಮೊಬೈಲ್‌ನಲ್ಲಿ ಆ ವೀಡಿಯೋ ಪತ್ತೆಯಾಗಿಲ್ಲ ಎಂಬುದು ಪ್ರಕರಣ ದಾಖಲಿಸಿಕೊಳ್ಳದೊರಲು ಮಾನದಂಡ ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ವೀಡಿಯೋ ಮಾಡಿರುವುದನ್ನು ಈಗಾಗಲೇ ಆ ಯುವತಿಯರು ಒಪ್ಪಿಕೊಂಡಿದ್ದಾರೆ. ಇದರ ಹಿಂದಿರುವ ಜಾಡನ್ನು ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಯ ಜವಾಬ್ದಾರಿ. ಕೂಡಲೇ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ

Post a Comment

0 Comments