ಹಿರಿಯ ಸಂಸ್ಕೃತ ವಿದ್ವಾಂಸ, ಪುರೋಹಿತ, ಅಶ್ವತ್ಥಪುರ ಶ್ರೀ ಕೆ. ಯಜ್ಞೇಶ್ವರ ಭಟ್ ನಿಧನ

ಜಾಹೀರಾತು/Advertisment
ಜಾಹೀರಾತು/Advertisment

 ಪುರೋಹಿತ ಕೆ. ಯಜ್ಞೇಶ್ವರ ಭಟ್ ನಿಧನ 





ಮೂಡುಬಿದಿರೆ, ಜು. 22: ಹಿರಿಯ ಸಂಸ್ಕೃತ ವಿದ್ವಾಂಸ, ಪುರೋಹಿತ, ಅಶ್ವತ್ಥಪುರ ಶ್ರೀ

ಸೀತಾರಾಮಚಂದ್ರ ದೇವಸ್ಥಾನದ ವಿಶ್ರಾಂತ ಅರ್ಚಕ ವೇ|ಮೂ| ಕಂಚಿಬೈಲು ಯಜ್ಞೇಶ್ವರ ಭಟ್

ಶುಕ್ರವಾರ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಶೃಂಗೇರಿ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಸಂಸ್ಕೃತಾಭ್ಯಾಸ, ವೈದಿಕ ಶಿಕ್ಷಣ ಜೊತೆಗೆ

ಅಲಂಕಾರ, ತರ್ಕಶಾಸ್ತ್ರ ಪೂರೈಸಿ, ಧಾರವಾಡದ ಶ್ರೀ ಶಂಕರಾಚಾರ್ಯ ಸಂಸ್ಕೃತ

ಮಹಾವಿದ್ಯಾಲಯ ಹಾಗೂ ಬಾಲಚಂದ್ರ ಶಾಸ್ತ್ರಿಯವರ ಬಳಿ ಕಾವ್ಯ ಶಿಕ್ಷಣ ಪೂರೈಸಿದರು.

ಮೈಸೂರು ಮಹಾರಾಜ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಜ್ಯೋತಿಶ್ಯಾಸ್ತ್ರ ಅಧ್ಯಯನ

ನಡೆಸಿದರು.

ಬಳಿಕ ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಪ್ರಧಾನ ಅರ್ಚಕರಾಗಿ, ಊರ

ಪೂರೋಹಿತರಾಗಿ ಅನೇಕ ಮಂದಿಗೆ ಧಾರ್ಮಿಕ ಹಾಗೂ ಸಾಮಾಜಿಕ ಮಾರ್ಗದರ್ಶನ ನೀಡಿ

ಆದರಣೀಯರಾಗಿದ್ದರು.

ಸುಮಾರು 15 ವರ್ಷ ಕಾಲ ಬಡಗಮಿಜಾರು ಗ್ರಾಮ ಪಂಚಾಯತ್ ಸದಸ್ಯರಾಗಿ,

ಉಪಾಧ್ಯಕ್ಷರಾಗಿದ್ದರು. ಸಂಪಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯ, ಅಶ್ವತ್ಥಪುರ

ದೇಶಸ್ಥ ಬ್ರಾಹ್ಮಣ ಪರಿಷತ್ ಆಡಳಿತ ಸಮಿತಿ ಸದಸ್ಯ, ಶ್ರೀ ವಾಣಿವಿಲಾಸ ವಿದ್ಯಾಸಂಘ

ಕಾರ್ಯಕಾರಿ ಸಮಿತಿ ಸದಸ್ಯ, ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯರಾಗಿ

10 ವರ್ಷ ಕಾಲ ಕಾರ್ಯನಿರ್ವಹಿಸಿದ್ದರು.

ತಮ್ಮ ತೀರ್ಥರೂಪರ ಹೆಸರಿನಲ್ಲಿ ಶ್ರೀನಾರಾಯಣಾನಂದ ಸರಸ್ವತಿ ಸ್ವಾಮಿ ಟ್ರಸ್ಟ್ ಮೂಲಕ

ಈರ್ವರು ಹಿರಿಯ ಸಂಸ್ಕೃತ ವಿದ್ವಾಂಸರು ಹಾಗೂ ಪುರೋಹಿತರನ್ನು ವಿಪ್ರಭೂಷಣ

ಪ್ರಶಸ್ತಿಯೊಂದಿಗೆ ಸನ್ಮಾನಿಸಿದ್ದರು.

ಶೃಂಗೇರಿ ಶ್ರೀಮಠ ಹಾಗೂ ಜಗದ್ಗುರುಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಯಜ್ಞೇಶ್ವರ

ಭಟ್ ಅವರಿಗೆ ಸ್ವರ್ಣವಲ್ಲೀ, ಕೂಡ್ಲಿ ಶೃಂಗೇರಿ ಮಠ, ಶಕಟಪುರ ಮಠ, ಹುಬ್ಬಳ್ಳಿ-

ಧಾರವಾಡ ಶ್ರೀರಾಮ ಸೇವಾ ಸಂಘ, ಬೆಂಗಳೂರು ವಿದ್ಯಾವಿಲಾಸಿನೀ ಸಭಾ, ಕಾರ್ಕಳ ತಾಲೂಕು

ಬ್ರಾಹ್ಮಣ ಸಭಾ ಮೊದಲಾದ ಸಂಘಸಂಸ್ಥೆಗಳು ಗೌರವಿಸಿವೆ.

ಮೃತರು ಪತ್ನಿ, ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ

Post a Comment

0 Comments