ಇರುವೈಲು : ಬಿಲ್ಲವ ಸಂಘದಿಂದ ಪುಸ್ತಕ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಇರುವೈಲು : ಬಿಲ್ಲವ ಸಂಘದಿಂದ ಪುಸ್ತಕ ವಿತರಣೆ




ಮೂಡುಬಿದಿರೆ:  ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಮತ್ತು ಮಹಿಳಾ ಘಟಕ  ಇರುವೈಲು- ಪುಚ್ಚಮೊಗರು  ಇದರ ವತಿಯಿಂದ  6 ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನ ಜೀವನದಲ್ಲಿ ವಿದ್ಯಾಭ್ಯಾಸವೇ ಮುಖ್ಯ. ಆದ್ದರಿಂದ ಪೋಷಕರು ಮಕ್ಕಳು ಎಷ್ಟು ಕಲಿಯುತ್ತಾರೋ ಕಲಿಸಿ, ಅವರ ಕನಸುಗಳನ್ನು ನನಸಾಗಿಸಲು ಹೆತ್ತವರ ಪಾತ್ರ ಮುಖ್ಯ ಎಂದರು.

ಎಡಪದವು ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಕುರಿತು ಮಾಹಿತಿ ನೀಡಿದರು. 

ಒಟ್ಟು 215 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು.

ಪಂಚಾಯತ್ ಸದಸ್ಯರುಗಳಾದ ನಾಗೇಶ್ ಅಮೀನ್, ಹರಿಣಾಕ್ಷಿ, ಪೂವಪ್ಪ ಸಾಲ್ಯಾನ್ ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ಬಿಲ್ಲವ ಸಂಘದ ಅಧ್ಯಕ್ಷ ಕುಮಾರ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ದೀಪಾ ದಿನೇಶ್, ಕಾರ್ಯದರ್ಶಿ ಪ್ರಮೀಳಾ ರಾಜೇಶ್ ಈ ಸಂದರ್ಭದಲ್ಲಿದ್ದರು.

ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು.

Post a Comment

0 Comments