ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಿದ ಶಾಸಕ ಕೋಟ್ಯಾನ್:ರಸ್ತೆ ಸುರಕ್ಷತಾ ಕ್ರಮಗಳ ಅಳವಡಿಕೆ

ಜಾಹೀರಾತು/Advertisment
ಜಾಹೀರಾತು/Advertisment

 ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಿದ ಶಾಸಕ ಕೋಟ್ಯಾನ್:ರಸ್ತೆ ಸುರಕ್ಷತಾ ಕ್ರಮಗಳ ಅಳವಡಿಕೆ




ಇತ್ತೀಚೆಗೆ ಮೂಡುಬಿದಿರೆಯ ವಿವಿಧೆಡೆ ವಿದ್ಯಾರ್ಥಿಗಳು ಅಪಘಾತವನ್ನು ಎದುರಿಸಿದ್ದು ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಮೂಡುಬಿದಿರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.


ವಿದ್ಯಾಸಂಸ್ಥೆಗಳ ಬಳಿ ಅಪಘಾತಗಳನ್ನು ತಡೆಗಟ್ಟಲು ರಸ್ತೆ ವಿಭಜಕಗಳು ಮತ್ತು ಹಂಪ್ ಗಳನ್ನು ಅಳವಡಿಸಬೇಕೆಂದು ವಿದ್ಯಾರ್ಥಿ ಸಮೂಹ ಅಗ್ರಹಿಸಿದ್ದು ಅದರಂತೆ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಹಾಗೂ ಮೈಟ್ ಕಾಲೇಜು ಸೇರಿದಂತೆ ವಿದ್ಯಾಸಂಸ್ಥೆಗಳ ಬಳಿ ರಸ್ತೆ ವಿಭಜಕ ಹಾಗೂ ರೋಡ್ ಹಂಪ್ ಗಳನ್ನು ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.


ಈ ಬಗ್ಗೆ ಶಾಸಕ ಉಮಾನಾಥ್ ಕೋಟ್ಯಾನ್ ರವರು ಭರವಸೆ ನೀಡಿದ್ದು ಅದರಂತೆಯೇ ಶೀಘ್ರವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ.

Post a Comment

0 Comments