ಕತ್ತಲನ್ನು ದೂರ ಮಾಡಿ ಬೆಳಕು ನೀಡುವುದೇ ನಿಜವಾದ ಶಿಕ್ಷಣ -ವೀರೇಶಾನಂದ ಸ್ವಾಮೀಜಿ
ಮೂಡುಬಿದಿರೆ: ಯಾವ ಕಲಿಕೆ ನಮ್ಮನ್ನು ಕತ್ತಲಿನಿಂದ ದೂರ ಮಾಡಿ ಬೆಳಕನ್ನು ನೀಡುತ್ತದೆಯೊ ಅದೇ ನಿಜವಾದ ಶಿಕ್ಷಣ. ಆದರೆ ಒಳ್ಳೆಯ ಶಿಕ್ಷಣವನ್ನು ಸಮಾಜಕ್ಕೆ ನೀಡಬೇಕಾದವರೇ ನಕಲು ಅಂಕಪಟ್ಟಿ, ಪಿಹೆಚ್ ಡಿಗಾಗಿ ಮೊರೆ ಹೋಗಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿರುವುದರಿಂದ ಇಂದು ಶಿಕ್ಷಣ ಶಿಕ್ಷೆಯಾಗುತ್ತಿದೆ. ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬುಧವಾರ ಕಲ್ಲಬೆಟ್ಟು ಎಕ್ಸಲೆಂಟ್ ಕಾಲೇಜಿನಲ್ಲಿ ಸ್ವಾಮಿ `ವಿವೇಕಾನಂದ ಮಾನವೋತ್ಥಾನ ವೇದಿಕೆ' ಹಾಗೂ ಕಾಲೇಜಿನ ಆವರಣದಲ್ಲಿ ವೀತರಾಗ ಧ್ಯಾನ ಮಂದಿರವನ್ನು ಉದ್ಘಾಟಿಸಿ ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಒಂದು ಉತ್ತಮ ಶಾಲೆಯನ್ನು ಆರಂಭಿಸುವುದರಿಂದ ಭವಿಷ್ಯದಲ್ಲಿ ನೂರು ಬಂಧಿಖಾನೆ ತೆರೆಯವುದನ್ನು ತಡೆಗಟ್ಟಬಹುದು. ಇದು ನಮ್ಮ ಆಡಳಿತ ವ್ಯವಸ್ಥೆಗೆ ಅರ್ಥವಾಗಬೇಕು. ಮೌಲ್ಯಯುತ ಜೀವನ ನಡೆಸುವ ಶಿಕ್ಷಣದ ಅಗತ್ಯ ಇದೆ ಎಂದ ಅವರು
ಶಾರೀರಿಕ ಸಮಸ್ಯೆಗಳ ಪರಿಹಾರಕ್ಕೆ ಮಾತ್ರ ಯೋಗ ಎನ್ನುವುದು ತಪ್ಪು ಕಲ್ಪನೆ. ಯೋಗ ಮನುಷ್ಯನನ್ನು ಸರ್ವ ರೀತಿಯ ದಾಸ್ಯದಿಂದ ಮುಕ್ತಗೊಳಿಸುತ್ತದೆ. ಮನುಷ್ಯನ ಅಭ್ಯುದಯದಲ್ಲಿ ಯೋಗದ ಪಾತ್ರ ಮಹತ್ವದ್ದಾಗಿದೆ ಎಂದರು. ಮುಖ್ಯ ಅಭ್ಯಾಗತರಾದ ಖ್ಯಾತ ವಾಸ್ತು ತಜ್ಞರು, ವಿಶ್ರಾ೦ತ ಪ್ರಾಧ್ಯಾಪಕರಾದ ರಾಮಚ೦ದ್ರ ಆಚಾರ ಮಾತನಾಡಿ ಯೋಗದ ಉದ್ದೇಶ ಸಾರ್ಥಕವಾಗುವುದು ಧ್ಯಾನದಿ೦ದ ಬಹಿರ್ ಇ೦ದ್ರಿಯಗಳನ್ನು ಮುಚ್ಚಿ ಬಾಹ್ಯ ಪ್ರಪ೦ಚವನ್ನು ಮರೆತು ನಿರ್ಲಿಪ್ತರಾಗಿ ಸ್ವಾತ್ಮಾರಾಮರಾಗಿ ನಮ್ಮ೦ತರ೦ಗ ಬಿ೦ಬಿಸುವ ಭಾವ ತರ೦ಗಗಳು ಧ್ಯಾನದ ಮೂಲಕ ಈ ಧ್ಯಾನ ಮ೦ದಿರದಲ್ಲಿ ಉಸಿರಾಡಲಿ. ಎಕ್ಸಲೆ೦ಟ್ ಸ೦ಸ್ಥೆ ಇನ್ನು ಮು೦ದೆ ಧ್ಯಾನ ಭೂಮಿ ಆಗಲಿ ಎ೦ದು ಆಶಿಸಿದರು.
ಸಂಸ್ಥೆಯ ವತಿಯಿಂದ ಸ್ವಾಮೀಜಿಯನ್ನು ಮತ್ತು ಅಂತರಾಷ್ಟ್ರೀಯ ಯೋಗಪಟು, ಎಕ್ಸಲೆಂಟ್ ನ ವಿದ್ಯಾರ್ಥಿನಿ ಐಶಾನಿ ಜಿ. ರೈ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ವಿವಿಧ ಭಂಗಿಯ ಯೋಗಾಸನವನ್ನು ಪ್ರಸ್ತುತ ಪಡಿಸಿದರು. ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದರು.ಮಾಜಿ ಸಚಿವ ಅಭಯಚಂದ್ರ ಜೈನ್, ನಿವೃತ್ತ ಪ್ರಾಧ್ಯಾಪಕ ರಾಮಚಂದ್ರ ಆಚಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಚೌಟರ ಅರಮನೆಯ ಕುಲದೀಪ್ ಎಂ, ಉದ್ಯಮಿ ಶ್ರೀಪತಿ ಭಟ್, ಪ್ರೌಢಶಾಲೆಯ ಮುಖ್ಯೋಪಧ್ಯಾಯ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು. ರಶ್ಮಿತಾ ಜೈನ್ ಸ್ವಾಗತಿಸಿದರು. ಪ್ರಾಧ್ಯಾಪಕ ವಾದಿರಾಜ ಕಲ್ಲೂರಾಯ ಪರಿಚಯಿಸಿದರು.ಜಯಶೀಲ್ ನಿರೂಪಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವಪ್ರಸಾದ್ ವಂದಿಸಿದರು.
0 Comments